March 19, 2026

ಉಳ್ಳಾಲ : ಬಾವಿ ಕೊರೆಯಲು ಸ್ಫೋಟಕ ಬಳಕೆ: ಆಘಾತಕ್ಕೊಳಗಾದ ಗರ್ಭಿಣಿ ಮಹಿಳೆ: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

0
20230425_210750.jpg

ಉಳ್ಳಾಲ: ಬಾವಿ ಕೊರೆಯಲು ಬಳಸಿದ ಸ್ಫೋಟಕದಿಂದ ಗರ್ಭಿಣಿ ಮಹಿಳೆ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಕಬೈಲು ಎಂಬಲ್ಲಿ ಸಂಭವಿಸಿದೆ.

ಬಡಕಬೈಲು ನಿವಾಸಿ ಹರೀಶ್ ಎಂಬವರ ಪತ್ನಿ ಸಾವಿತ್ರಿ ಶಬ್ದದಿಂದ ಆಘಾತಕ್ಕೆ ಒಳಗಾದವರು. ಇವರ ಮನೆಯ 100 ಮೀ ಅಂತರದಲ್ಲಿ ಫಾರುಕ್ ರೆಂಜಾಡಿ ಎಂಬವರು ಕಳೆದ ಎರಡು ವಾರದಿಂದ ಬಾವಿ ತೋಡುವ ಕೆಲಸ ಮಾಡುತ್ತಿದ್ದರು. ಬಾವಿ ತೋಡುವ ಮಧ್ಯೆ ಸಿಗುವ ಬಂಡೆಕಲ್ಲುಗಳನ್ನು ಒಡೆಯಲು ಬಾವಿಯ ಮಾಲೀಕರು ಸ್ಫೋಟಕ ಬಳಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಾವಿತ್ರಿ ಅವರು ದೊಡ್ಡ ಸದ್ದಿನಿಂದ ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಂತೆ ಬಾವಿ ಮಾಲೀಕ ಫಾರುಕ್ ರೆಂಜಾಡಿ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!