February 1, 2026

ಸುಬ್ರಹ್ಮಣ್ಯ: ಧಾರಕಾರ ಮಳೆ: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಯಲ್ಲಿ ಮಂದಹಾಸ
 

0
india-monsoon-rains-1019x573.jpg

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಇಂದು ಧಾರಕಾರ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಯಲ್ಲಿ ಮಂದಹಾಸ ಮೂಡಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಕಾರ ಮಳೆ ಸುರಿದಿದೆ.

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪರಿಸರದಲ್ಲಿ ಒಂದು ಗಂಟೆಗೂ ಅಧಿಕ ಸಮಯ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಐನೆಕಿದು, ಗುತ್ತಿಗಾರು, ಬಳ್ಪ, ಯೇನೆಕಲ್ಲು, ಕೈಕಂಬ, ಪಂಜ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿ ತಂಪೆರೆದಿದೆ. ಸುಳ್ಯದಲ್ಲಿ ಮಧ್ಯಾಹ್ನ ವೇಳೆ ಕೇವಲ ಐದು ನಿಮಿಷದ ಹನಿ ಮಳೆಯಾಗಿದ್ದು, ಬಳಿಕ ಮೋಡ ಕವಿದ ವಾತವರಣ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!