February 2, 2026

ಉಪ್ಪಿನಂಗಡಿ: ಸ್ಕೂಟರ್ ಗೆ ಕಾರು ಢಿಕ್ಕಿ: ಸವಾರ ಮೃತ್ಯು, ಇಬ್ಬರು ಮಕ್ಕಳಿಗೆ ಗಂಭೀರ ಗಾಯ

0
IMG-20230422-WA0035.jpg

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಇದೀಗ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ.

ಈದುಲ್ ಫಿತ್ರ್ ಸಂಭ್ರಮದಲ್ಲಿ ನೆಂಟರಸ್ಥರ ಮನೆಗೆ ತನ್ನೆರೆಡು ಮಕ್ಕಳ ಜತೆ ತೆರಳುತ್ತಿದ್ದ ಜಾಫರ್ ರವರ ಸ್ಕೂಟರ್ ಗೆ ರಾಂಗ್ ಸೈಡ್ ನಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕ್ಯೂಟರ್ ಪೊದೆಗೆ ಹೋಗಿ ಬಿದ್ದಿದ್ದು ಜಾಫರ್ ರವರು ಸ್ಥಳದಲ್ಲೇ ಅಸು ನೀಗಿದ್ದಾರೆ.

ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಈ ಅಪಘಾತ ನಿಜಕ್ಕೂ ಆಘಾತ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!