February 2, 2026

ಪ್ರಧಾನಿ ಮೋದಿ ಭೇಟಿಯ ವಿರುದ್ಧ ಬೆದರಿಕೆ ಪತ್ರ: ಕೇರಳದಲ್ಲಿ ಹೈ ಅಲರ್ಟ್

0
IMG-20230422-WA0040.jpg

ತಿರುವನಂತಪುರಂ: ಕೇರಳ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಕೇರಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಎಪ್ರಿಲ್ 24 ರಂದು ಕೊಚ್ಚಿಗೆ ಪ್ರಧಾನಿ ಮೋದಿಯವರ ಯೋಜಿತ ಭೇಟಿಯ ಸಂದರ್ಭದಲ್ಲಿ ಆತ್ಮಾಹುತಿ ದಾಳಿಯ ಬೆದರಿಕೆಯನ್ನು ಪತ್ರದಲ್ಲಿ ಹಾಕಲಾಗಿದೆ.

ಇನ್ನು ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯ ಹೆಸರು ಮತ್ತು ಇತರ ಮಾಹಿತಿಯನ್ನು ಪತ್ರ ಒಳಗೊಂಡಿರುವುದು ಪೊಲೀಸರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ತತ್ ಕ್ಷಣ ತನಿಖೆ ಆರಂಭಿಸಿದ್ದಾರೆ.

ಬೆದರಿಕೆ ಪತ್ರದಲ್ಲಿ ಹೆಸರಿರುವ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದಾರೆ. ಆದರೆ ಅವರು ಪತ್ರ ಬರೆದಿರುವುದನ್ನು ನಿರಾಕರಿಸಿದ್ದು, ಅವರ ವಿರೋಧಿಗಳು ತನ್ನ ಹೆಸರನ್ನು ಹಾಳು ಮಾಡುವ ದುರುದ್ದೇಶದಿಂದ ಪತ್ರ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!