February 2, 2026

ಬೀದಿ ನಾಯಿಗಳ ದಾಳಿ: ಆಂಧ್ರಪ್ರದೇಶದಲ್ಲಿ 18 ತಿಂಗಳ ಹೆಣ್ಣು ಮಗು ಬಲಿ

0
IMG-20230422-WA0034.jpg

ಶ್ರೀಕಾಕುಳಂ: ಬೀದಿ ನಾಯಿಯ ದಾಳಿಯಿಂದ 18 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿ ಸಿಗಡಮ್ ಮಂಡಲದ ಮೆಟ್ಟವಲಸಾ ಗ್ರಾಮದಲ್ಲಿ ನಡೆದಿದೆ.

ಪಿ ಸಾತ್ವಿಕಾ ಮೃತಪಟ್ಟ ಮಗು.

ಇನ್ನು ಸಾತ್ವಿಕಾ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ದಾಳಿ ನಡೆಸಿ ಕೊಲೆ ಮಾಡಿದೆ ಎನ್ನಲಾಗಿದೆ.

ಸಾತ್ವಿಕಾ ಅವರ ಪೋಷಕರು ಮಗು ಅಳುವುದನ್ನು ನೋಡಿ ಕೂಡಲೇ ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಳು.

Leave a Reply

Your email address will not be published. Required fields are marked *

error: Content is protected !!