ಸಾಗರಕಟ್ಟೆ ಸಮೀಪ ಕಾರು-ಬೈಕ್ ಅಪಘಾತ:
ಬೈಕ್ ಸವಾರರಿಬ್ಬರೂ ಮೃತ್ಯು
ಮೈಸೂರು: ತಾಲ್ಲೂಕಿನ ಸಾಗರಕಟ್ಟೆ ಸಮೀಪ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಮೃತಪಟ್ಟಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸಕೋಟೆ ಗ್ರಾಮದ ನಿವಾಸಿಗಳಾದ ವಿಶ್ವ (22) ಹಾಗೂ ವಿಷ್ಣು (20) ಮೃತಪಟ್ಟವರು.
ಇವರು ಹೊಸಕೋಟೆಯಿಂದ ಕೆ.ಆರ್.ನಗರಕ್ಕೆ ಬೈಕಿನಲ್ಲಿ ತೆರಳುವಾಗ ಎದುರಿನಿಂದ ಬಂದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರು ಚಾಲಕನ ಸ್ಥಿತಿ ತೀರಾ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಸದ್ಯ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





