ವಿಟ್ಲ: ಒಕ್ಕೆತ್ತೂರು ನೂರುಲ್ ಇಸ್ಲಾಂ ಮದರಸದ ಪ್ರಥಮ ಮಹಡಿಯ ನೂತನ ಕಟ್ಟಡದ ಉದ್ಘಾಟನೆ
ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದರಸದ ಪ್ರಥಮ ಮಹಡಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ಕೆ.ಎ ಮಹಮುದುಲ್ ಫೈಝಿ ವಾಲೆಮುಂಡೋವು ನೂತನ ಕಟ್ಟಡ ಮತ್ತು ಹೈಮಾಸ್ಕ್ ದೀಪವನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಅಬ್ಬಾಸ್ ಕರಾವಳಿ, ಖಾದರ್ ಸುಪರ್, ಹಮೀದ್ ಸಿ.ಎಚ್, ಹನೀಫ್ ಬೆಳಿಯೂರು, ಇಸ್ಮಾಯಿಲ್ ಸುಪರ್, ಅಶ್ರಪ್ ಜೆ, ಅಬೂಬಕ್ಕರ್ ಗಲ್ಲಿ, ಶರೀಫ್ ಗಲ್ಲಿ, ನಬೀಲ್ ಒಕ್ಕೆತ್ತೂರು, ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಬದ್ರಿಯಾ ಜುಮಾ ಮಸೀದಿಯ ಖತೀಬು ಮಜೀದ್ ಕಾಮಿಲ್ ಸಖಾಫಿ, ಸದರ್ ಸ್ವಾದಿಕ್ ಸಖಾಫಿ, ಅಬ್ಬಾಸ್ ದಾರಿಮಿ ಕೆಲಿಂಜ, ಇಬ್ರಾಹಿಂ ಸಖಾಫಿ ಕೊಡಂಗೆ, ಅಬ್ಬಾಸ್ ಮದನಿ ವಿಟ್ಲ, ಸುಲೈಮಾನ್ ಸಖಾಫಿ, ಮಸೀದಿ ಅಧ್ಯಕ್ಷ ಹಮೀದ್ ಲಕ್ಸೂರಿ, ಕಾರ್ಯದರ್ಶಿ ಇಕ್ಬಾಲ್, ತೌಸಿಫ್ ಮಾಸ್ಟರ್, ಹನೀಫ್ ಎಂಜಿನಿಯರ್, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ಕುಂಞ ಹಾಜಿ ಉರುಮಣೆ, ರಾಝೀಕ್ ಕೆಲಿಂಜ ಕಾರ್ಸ್, ಮುಬೀನ್ ಸಾಹೇಬು ವಿಟ್ಲ, ಬಶೀರ್ ಸುಪರ್, ನೂರುಲ್ ಇಸ್ಲಾಂ ಮದರಸ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಸುಪರ್ ಉಪಸ್ಥಿತರಿದ್ದರು.






