ವಿಟ್ಲದಲ್ಲಿ ಲೈಟ್ ಹೌಸ್ ಮಳಿಗೆ ಉದ್ಘಾಟನೆ:
ಗೃಹಾಲಂಕಾರ ಸಂಗ್ರಹದ ನೂತನ “ಲೈಟ್ ಹೌಸ್”
ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ವಿ.ಎಚ್.ಕಾಂಪ್ಲೆಕ್ಸ್ ನಲ್ಲಿ ಗೃಹಾಲಂಕಾರ ಸಂಗ್ರಹದ ನೂತನ “ಲೈಟ್ ಹೌಸ್” ಮಳಿಗೆ ಉದ್ಘಾಟನೆಗೊಂಡಿತು.
ನೂತನ ಮಳಿಗೆಯನ್ನು ಅಲಿ ತಂಙಳ್ ಅವರು ಪುತ್ರ ಸಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ .ಮಹಮ್ಮದ್, ಮಂಗಳೂರು ಎಂ.ಫ್ರೆಂಡ್ಸ್ ನ ಕಾರ್ಯದರ್ಶಿ ರಶೀದ್ ವಿಟ್ಲ, ಎಸ್‌ಡಿಪಿಐ ಜಿಲ್ಲಾ ಮುಖಂಡ ಶಾಕಿರ್ ಅಳಕೆಮಜಲು,ಬೈರಿಕಟ್ಟೆ ಜುಮಾ ಮಸೀದಿ ಖತೀಬ್ ಲತೀಫ್ ಹನೀಫಿ, ಪುಣಚ ಮಸೀದಿ ಖತೀಬ್ ಹಸೈನಾರ್ ಫೈಝಿ,ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ಭಾಗವಹಿಸಿದ್ದರು.



ಇದೇ ಸಂದರ್ಭ ನಿವೃತ್ತ ಯೋಧ ದಯಾನಂದ ನೆತ್ರೆಕೆರೆಯವರನ್ನು ಸನ್ಮಾನಿಸಲಾಯಿತು. ಲೇಖಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ಸಿದ್ದೀಕ್ ಮತ್ತು ಹಾರೀಸ್ ಉಪಸ್ಥಿತರಿದ್ದರು.





