February 2, 2026

ಉಡುಪಿ: BJP ಹೆಲಿಕಾಪ್ಟರ್ ನಲ್ಲಿ ಬೃಹತ್ ಮೊತ್ತದ ಹಣ ತಂದಿದೆ: ಸೊರಕೆ ಆರೋಪ

0
Screenshot_2023-04-17-15-00-42-02_680d03679600f7af0b4c700c6b270fe7.jpg

ಉಡುಪಿ: “ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಡುಪಿಗೆ ಬಂದಿರುವ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಅಪಾರ ಪ್ರಮಾಣದ ಹಣದ ಗಂಟನ್ನು ತರಲಾಗಿದೆ”ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಅವರ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ,”ನನಗೆ ಸಿಕ್ಕಿರುವ ಮಾಹಿತಿಯಂತೆ ಇಂದು ಅಣ್ಣಾಮಲೈ ಅವರ ಹೆಲಿಕಾಪ್ಟರ್ ಮೂಲಕ ನಮ್ಮ ಜಿಲ್ಲೆಗೆ ಹಣದ ಗಂಟು ರವಾನೆಯಾಗಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆಯೇ ಪಟಾಕಿ ಸಿಡಿಸಿರುವ ಇವರು ಒಂದು ವೇಳೆ ಗೆದ್ದರೆ ಬಾಂಬ್ ಸ್ಫೋಟಿಸಬಹುದು. ಚುನಾವಣೆ ಘೋಷಣೆಗೂ ಮುನ್ನವೇ ನಾವು ನಾಲ್ಕು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಸುಳ್ಳು ಆರೋಪಗಳಿಂದ ಕಳೆದ ನಾವು ಸೋತಿದ್ದೇವೆ” ಎಂದು ಸೊರಕೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!