July 1, 2026

ಕಾರಿನ ಟಯರ್ ಸ್ಫೋಟ: ಬಿಜೆಪಿ ನಾಯಕಿ ಮೃತ್ಯು

0
image_editor_output_image1111907872-1681725600763.jpg

ಹೈದರಾಬಾದ್: ತೆಲಂಗಾಣದ ಬೀಚುಪಳ್ಳಿ ಬಳಿ ಅವರ ಕಾರಿನ ಟೈರು ಸ್ಫೋಟಗೊಂಡಿದ್ದರಿಂದ ಅವರು ಕಾರು ಮಗುಚಿ ಬಿದ್ದು ಬಿಜೆಪಿ ನಾಯಕಿ ಮೃತಪಟ್ಟಿದ್ದಾರೆ.

ರವಿವಾರ ಹೈದರಾಬಾದ್‌ನಿಂದ ಕರ್ನೂಲಿಗೆ ತೆರಳುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಮಾಜಿ ಶಾಸಕಿ ಹಾಗೂ ಕರ್ನೂಲು ಜಿಲ್ಲೆಯ ಆಲೂರು ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿಜೆಪಿ ನಾಯಕಿ ನೀರಜಾ ರೆಡ್ಡಿ ಮೃತಪಟ್ಟಿದ್ದಾರೆ.

ಕೊಂಡಾಪುರಂ ಪೊಲೀಸರ ಪ್ರಕಾರ, 52 ವರ್ಷದ ನೀರಜಾ ಅವರು ತೆಲಂಗಾಣಕ್ಕೆ ತೆರಳುತ್ತಿದ್ದಾಗ, ಅವರ ಕಾರಿನ ಟೈರು ಸ್ಫೋಟಗೊಂಡು, ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಪಘಾತ ಸಂಭವಿಸಿದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!