ಕ್ರಿಸ್‌ಮಸ್ ಪರೇಡ್‌ನಲ್ಲಿ ಭಾಗವಹಿಸಿದ್ದ ಜನರ ಮೇಲೆ ಹರಿದ ವಾಹನ:
5 ಮಂದಿ ಮೃತ್ಯು, 40ಕ್ಕೂ ಹೆಚ್ಚು ಮಂದಿ ಗಾಯ
ವುಕೆಸಾ (ಅಮೆರಿಕ): ವಿಸ್ಕಾನ್ಸಿನ್‌ನ ವುಕೆಸಾದಲ್ಲಿ ಭಾನುವಾರ ರಾತ್ರಿ ಕ್ರಿಸ್‌ಮಸ್ ಪರೇಡ್‌ನಲ್ಲಿ ಭಾಗವಹಿಸಿದ್ದ ಜನರ ಮೇಲೆ ಎಸ್‌ಯುವಿ ಹರಿದ ಕಾರಣ 5 ಮಂದಿ ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಹಲವರು ಮೊಬೈಲ್ ಫೋನ್‌ಗಳಲ್ಲಿ ಚಿತ್ರಿಸಿಕೊಂಡಿದ್ದಾರೆ.
‘ಹಲವರು ಸಾವಿಗೀಡಾಗಿದ್ದಾರೆ. ಕೆಂಪು ಬಣ್ಣದ ಎಸ್‌ಯುವಿಯ ಚಾಲಕನನ್ನು ಬಂಧಿಸಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಮುಖ್ಯಸ್ಥ ಡ್ಯಾನ್ ಥಾಮ್ಸ್‌ನ್ ತಿಳಿಸಿದ್ದಾರೆ.
ವಾಹನವು ಬ್ಯಾರಿಕೇಡ್‌ಗಳನ್ನು ಗುದ್ದಿಕೊಂಡು ಜನರ ಮೇಲೆ ಹರಿದಿದೆ. ಕೆಲವರು ಸಾವಿಗೀಡಾಗಿದ್ದು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳೀಯ ಆಸ್ಪತ್ರೆಯೊಂದರಲ್ಲಿ 30ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿರುವುದಾಗಿ ವರದಿಯಾಗಿದೆ. ಕ್ಯಾಥೊಲಿಕ್ ಶಾಲೆಯ ಮಕ್ಕಳೂ ಗಾಯಗೊಂಡಿದ್ದಾರೆ ಎನ್ನಲಾಗಿದೆ.





