February 3, 2026

ಪುತ್ತೂರು: ಮನೆ ಬಾಗಿಲಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಮುಖಂಡರಿಗೆ ಘೇರಾವ್:
ಶಾಸಕ ಸಂಜೀವ ಮಠಂದೂರು ನಡೆಗೆ ತೀವ್ರ ಆಕ್ರೋಶ

0
IMG-20230412-WA0083.jpg

ಪುತ್ತೂರು: ಮನೆ ಬಾಗಿಲಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಹಾಗೂ ಬಿಜೆಪಿ ಮುಖಂಡರನ್ನು ಮನೆ ಬಾಗಿಲಿನಿಂದ ತೆರವುಗೊಳಿಸಿ ಅವಮಾನಿಸಿದ ಘಟನೆ ಶಾಸಕ ಸಂಜೀವ ಮಠಂದೂರು ಮನೆಯಲ್ಲಿ ನಡೆದಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಪಕ್ಷದ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಧಕೃಷ್ಣ ಬುಡಿಯಾರ್, ಚಂದ್ರಶೇಖರ್ ಬಪ್ಪಳಿಗೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇಂದು ಶಾಸಕ ಸಂಜೀವ ಮಠಂದೂರುರವರ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತ ಶಾಸಕ ಸಂಜೀವ ಮಠಂದೂರು ಹಾಗೂ ಅವರ ಗ್ಯಾಂಗ್ ನವರು ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ಬಿಜೆಪಿ ಮುಖಂಡರಿಗೆ ಘೇರಾವ್ ಹಾಕಿ ಅವಮಾನಿಸಿದ್ದಾರೆ.

ಇದೀಗ ಈ ಘಟನೆ ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!