February 2, 2026

ಬರೋಬ್ಬರಿ 122 ಕೋಟಿ ರೂ. ನೀಡಿ “VIP 7” ಫ್ಯಾನ್ಸಿ ನಂಬರ್‌ ಖರೀದಿ

0
image_editor_output_image-1142730642-1681288792309.jpg

ದುಬೈ: ಕೋಟ್ಯಂತರ ರೂ. ನೀಡಿ ದುಬಾರಿ ಬೆಲೆಯ ಕಾರುಗಳನ್ನು ಶ್ರೀಮಂತರು ಖರೀದಿಸುವುದು ನಿಮಗೆ ಗೊತ್ತೇ ಇದೆ. ಆದರೆ ದುಬೈಯಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್‌ ಖರೀದಿ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ವಿಐಪಿ ನಂಬರ್‌ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್‌ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ.

ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್‌ ನಿಗದಿ ಮಾಡಲಾಗಿತ್ತು. ಆರಂಭದ ಕೆಲವೇ ನಿಮಿಷಗಳಲ್ಲಿಇದು 30 ದಶಲಕ್ಷ ದಿರ್ಹಾಮ್‌ಗೆ ಹೋಗಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್‌ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್‌ ಗೆದ್ದವರು ಯಾರು ಎನ್ನುವುದು ಬಹಿರಂಗವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!