October 21, 2026

ಸಮುದ್ರದಲ್ಲಿ ಮಗುವನ್ನು ಮರೆತು ರೀಲ್ಸ್ ವಿಡಿಯೋ: ಅಲೆಗಳ ಮಧ್ಯೆ ಸಿಲುಕಿದ ಮಗು

0
image_editor_output_image896098733-1792568848743

ಹೊಸದಿಲ್ಲಿ: ಕಡಲತೀರದಲ್ಲಿ ಸಾಮಾಜಿಕ ಜಾಲತಾಣದ ರೀಲ್ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದ ದಂಪತಿಗಳು, ಅಲೆಗಳ ಅಬ್ಬರಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದ ತಮ್ಮ ಮಗುವನ್ನು ನಿರ್ಲಕ್ಷಿಸಿರುವ ಆಘಾತಕಾರಿ ವೀಡಿಯೊವೊಂದು ಆನ್‌ಲೈನ್‌ ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ವೇಳೆ ಅಲ್ಲೆ ಇದ್ದ ವ್ಯಕ್ತಿಯೊಬ್ಬರು ಸಮಯೋಚಿತವಾಗಿ ಧಾವಿಸಿ ಬಂದು ಮಗುವನ್ನು ರಕ್ಷಿಸಿರುವುದಾಗಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ನಿಖರವಾದ ಸ್ಥಳ, ದಿನಾಂಕ ಹಾಗೂ ವ್ಯಕ್ತಿಗಳ ವಿವರಗಳು ಲಭ್ಯವಿಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ವೈರಲ್ ಆಗಿರುವ ದೃಶ್ಯಗಳಲ್ಲಿ, ಕಡಲತೀರದಲ್ಲಿ ದಂಪತಿಗಳು ಫೋನ್ ಅಥವಾ ಸೆಲ್ಫಿ ಸ್ಟಿಕ್ ಬಳಸಿ ತಮ್ಮದೇ ವೀಡಿಯೊವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಿರುವುದು ಕಂಡುಬರುತ್ತದೆ. ನೀರಿನ ಬಳಿ ನಡೆಯುವಾಗ ಮಹಿಳೆ ಮಗುವಿನ ಕೈ ಹಿಡಿದುಕೊಂಡಂತೆ ಕಾಣಿಸಿಕೊಂಡರೂ, ಕೆಲವೇ ಕ್ಷಣಗಳಲ್ಲಿ ಮಗು ಜಾರಿ ಮರಳಿನ ಮೇಲೆ ಬಿದ್ದು, ಒಳಬರುವ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿಕೊಳ್ಳುತ್ತದೆ.

ಆ ಮಹಿಳೆ ಕ್ಯಾಮೆರಾ ಮುಂದೆ ಪೋಸ್ ನೀಡುವ ಮೊದಲು ಒಮ್ಮೆ ಹಿಂದೆ ನೋಡುತ್ತಾಳೆ, ಆದರೆ ಆ ವ್ಯಕ್ತಿ ಚಿತ್ರೀಕರಣ ಮುಂದುವರಿಸುತ್ತಾನೆ. ದಂಪತಿಗಳು ರೀಲ್ಸ್ ಮಾಡುವುದರಲ್ಲೇ ಸಂಪೂರ್ಣವಾಗಿ ಮಗ್ನರಾಗಿ ತಮ್ಮ ಮಗು ಅಲೆಗಳಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸುವುದಿಲ್ಲ.

X ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ತಾವು ಪತಿಯೊಂದಿಗೆ ಬೀಚ್‌ಗೆ ಭೇಟಿ ನೀಡಿದ್ದಾಗ ಈ ಘಟನೆ ಕಣ್ಣಿಗೆ ಬಿದ್ದಿರುವುದಾಗಿ ತಿಳಿಸಿದ್ದಾರೆ. ದಂಪತಿಗಳ ನಿರ್ಲಕ್ಷ್ಯದಿಂದಾಗಿ ಅಲೆಗಳಲ್ಲಿ ಕೊಚ್ಚಿಹೋಗುವಂತಿದ್ದ ಮಗುವನ್ನು ಅಲ್ಲೇ ಇದ್ದ ದಾರಿಹೋಕರೊಬ್ಬರು ತಕ್ಷಣವೇ ಮಧ್ಯಪ್ರವೇಶಿಸಿ ರಕ್ಷಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!