ಕಾಸರಗೋಡು: ಉಪ್ಪಳ ಪತ್ವಾಡಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಹೊಳೆಗೆ ಬಿದ್ದು ಕೂಲಿ ಕಾರ್ಮಿಕರೋರ್ವ ಮೃತ ಪಟ್ಟ ಘಟನೆ ನಡೆದಿದೆ.
ಜೋಡುಕಲ್ಲಿನ ಶೇಖರ(48) ಮೃತಪಟ್ಟವರು.
ಸ್ನೇಹಿತರ ಜೊತೆ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದು ಜೊತೆಗಿದ್ದವರು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

