March 23, 2026

ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟ: ನವವಿವಾಹಿತ ಸೇರಿ ಇಬ್ಬರು ಸಾವು

0
image_editor_output_image547628971-1680599657738.jpg

ಛತ್ತೀಸ್‌ಗಢ: ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ಮದುವೆಯ ಉಡುಗೊರೆಯಾಗಿ ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡ ಪರಿಣಾಮ ನವವಿವಾಹಿತ ಹಾಗೂ ಆತನ ಹಿರಿಯ ಸಹೋದರ ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.

ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಇರಿಸಲಾಗಿದ್ದ ಕೋಣೆಯ ಗೋಡೆಗಳು ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 1 ರಂದು 22 ವರ್ಷದ ಹೇಮೇಂದ್ರ ಮೆರಾವಿ ವಿವಾಹವಾಗಿದ್ದು, ಸೋಮವಾರ ಹೇಮೇಂದ್ರ ಹಾಗೂ ಇತರ ಕುಟುಂಬ ಸದಸ್ಯರು ತಮ್ಮ ಮನೆಯ ಕೋಣೆಯೊಳಗೆ ಮದುವೆಯ ಉಡುಗೊರೆಗಳನ್ನು ಹೊರ ತೆಗೆದಿದ್ದರು.

ಇನ್ನು ನವವಿವಾಹಿತ ಹೇಮೇಂದ್ರ ತನಗೆ ಗಿಫ್ಟ್ ಬಂದಿದ್ದ ಹೋಮ್ ಥಿಯೇಟರ್ ಸಿಸ್ಟಮ್ ವೈಯರ್ ರನ್ನು ಎಲೆಕ್ಟ್ರಿಕ್ ಬೋರ್ಡ್ ಗೆ ಸಿಕ್ಕಿಸಿ ಆನ್ ಮಾಡಿದಾಗ, ಭಾರೀ ಸ್ಫೋಟ ಸಂಭವಿಸಿದ್ದು ಹೇಮೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!