March 23, 2026

ಉಳ್ಳಾಲ: ಹರೇಕಳ-ಅಡ್ಯಾರ್ ಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಅಳವಡಿಸಲಾಗಿದ್ದ ಗೇಟುಗಳನ್ನು ಕಿತ್ತೆಸೆದ ಸಾರ್ವಜನಿಕರು

0
IMG-20230404-WA0062.jpg

ಉಳ್ಳಾಲ: ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಅಳವಡಿಸಲಾಗಿದ್ದ ಗೇಟುಗಳನ್ನು ಡಿವೈಎಫ್ಐ ಕಾರ್ಯಕರ್ತರು ಸಾರ್ವಜನಿಕರ ಸಹಕಾರದಲ್ಲಿ ಕಿತ್ತೆಸೆದು ಸಂಚಾರ ಮುಕ್ತಗೊಳಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆಯೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ ಒಂದರಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿತ್ತು. ಸಣ್ಣ ನೀರಾವರಿ ಇಲಾಖೆ ಆದೇಶ ಸಿಗದೇ ಮತ್ತು ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹಿನ್ನೆಲೆ ತೆರವುಗೊಳಿಸಲಾಗಿರಲಿಲ್ಲ.

ಈ ನಡುವೆ ಸೋಮವಾರ ಅಧಿಕಾರಿಗಳೇ ಕುಂಬಳಕಾಯಿಯೊಂದಿಗೆ ಹರೇಕಳಕ್ಕೆ ಬಂದರೂ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾದರೂ ನೀತಿ ಸಂಹಿತೆಯಿಂದಾಗಿ ಹಿಂದೆ ಸರಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!