“ಸಾಯಿಬಾಬಾ ದೇವರಲ್ಲ”: ವಿವಾದಾತ್ಮಕ ಹೇಳಿಕೆ ನೀಡಿದ ಧೀರೇಂದ್ರ ಕೃಷ್ಣ ಶಾಸ್ತ್ರಿ
ಹೊಸದಿಲ್ಲಿ: ಸಾಯಿಬಾಬಾ ದೇವರಲ್ಲ ಎಂದು ಹೇಳುವ ಮೂಲಕ ಬಾಗೇಶ್ವರ ಧಾಮದ ಸ್ವಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬಾಗೇಶ್ವರ್ ಧಾಮ್ ದೇವಮಾನವ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಸಾಯಿಬಾಬಾರನ್ನು ‘ಫಕೀರ’ ಎಂದು ಕರೆಯಬಹುದು, ಆದರೆ ಅವರನ್ನು ದೇವರು ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಧರ್ಮದ ಯಾವುದೇ ಸಂತರು ಅದು ಗೋಸ್ವಾಮಿ ತುಳಸಿದಾಸ್ ಜಿ ಅಥವಾ ಸೂರದಾಸ್ ಆಗಿರಲಿ, ಅವರು ಒಬ್ಬ ಸಂತ, ಮಹಾನ್ ವ್ಯಕ್ತಿ, ‘ಯುಗ ಪುರುಷ’, ‘ಕಲ್ಪ ಪುರುಷ’ ಆಗಿರಬಹುದು ಆದರೆ ದೇವರಲ್ಲ” ಎಂದು ಶಾಸ್ತ್ರಿ ಹೇಳಿದರು.




