March 22, 2026

ಉಮೇಶ್ ಪಾಲ್ ಪ್ರಕರಣ: ಮಾಜಿ ಸಂಸದ, ಗ್ಯಾಂಗ್ ಸ್ಟರ್ ಅತೀಖ್ ಅಹ್ಮದ್ ಗೆ ಜೀವಾವಧಿ ಶಿಕ್ಷೆ

0
image_editor_output_image-921920347-1679994300134.jpg

ಪ್ರಯಾಗ್ ರಾಜ್: ಉಮೇಶ್ ಪಾಲ್ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ- ಗ್ಯಾಂಗ್ ಸ್ಟರ್ ಅತೀಖ್ ಅಹಮದ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಯಾಗ್ ರಾಜ್ ಕೋರ್ಟ್ ಆದೇಶಿಸಿದೆ. ಅಲ್ಲದೆ ಐದು ಸಾವಿರ ರೂ ದಂಡ ವಿಧಿಸಲಾಗಿದೆ.

ಇದಕ್ಕೂ ಮೊದಲು ಇಂದು ಉಮೇಶ್ ಪಾಲ್ ಕಿಡ್ನಾಪ್ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಮತ್ತು ಮಾಜಿ ಸಂಸದ ಅತೀಖ್ ಅಹಮದ್ ದೋಷಿ ಎಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಶೇಷ ನ್ಯಾಯಾಲಯವು ತೀರ್ಪು ನೀಡಿತ್ತು.

ಪ್ರಕರಣದಲ್ಲಿ ಅತೀಖ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅತೀಖ್ ಅಹ್ಮದ್ ಸಹೋದರ ಅಶ್ರಫ್ ಸೇರಿದಂತೆ ಉಳಿದ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!