March 22, 2026

ಮಸೀದಿಗೆ ನುಗ್ಗಿದ ದುಷ್ಕರ್ಮಿಗಳು ಇಮಾಮ್‌ ನ ಗಡ್ಡ ಬೋಳಿಸಿ ಹಲ್ಲೆ: ‘ಜೈ ಶ್ರೀ ರಾಮ್‌’  ಹೇಳಲು ನಿರಾಕರಿಸಿದಕ್ಕೆ ಹಲ್ಲೆ, ಆಸ್ಪತ್ರೆಗೆ ದಾಖಲು

0
image_editor_output_image-1867290997-1679994966352.jpg

ಹೊಸದಿಲ್ಲಿ: ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ಮಸೀದಿಗೆ ನುಗ್ಗಿದ ಗುಂಪೊಂದು ಅಲ್ಲಿ ಪ್ರಾರ್ಥನೆಯ Doesn’t ವಹಿಸಿದ್ದ ಇಮಾಮ್‌ಗೆ ‘ಜೈ ಶ್ರೀ ರಾಮ್‌’ ಹೇಳಲು ಬಲವಂತಪಡಿಸಿ ನಂತರ ಹಲ್ಲೆಗೈದ ಘಟನೆ ರವಿವಾರ ಸಂಜೆ ಸುಮಾರು 7.30 ಕ್ಕೆ ನಡೆದಿದೆ.

ತಾನು ಮಸೀದಿಯೊಳಗೆ ಕುಳಿತುಕೊಂಡು ಕುರ್ ಆನ್‌ ಓದುತ್ತಿದ್ದುದ್ದಾಗ ಈ‌ ಕೃತ್ಯ ಎಸಗಿರುವುದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಮಾಮ್‌ ಝಕೀರ್‌ ಸಯ್ಯದ್‌ ಖಾಜಾ ಹೇಳಿದ್ದಾರೆ ತಿಳಿಸಿದ್ದಾರೆ.

ಮುಖಕ್ಕೆ ಬಟ್ಟೆಗಳನ್ನು ಸುತ್ತಿದ್ದ ಅಪರಿಚಿತರ ಗುಂಪೊಂದು ಮಸೀದಿ ಪ್ರವೇಶಿಸಿ ‘ಜೈ ಶ್ರೀ ರಾಮ್‌’ ಹೇಳಲು ನಿರಾಕರಿಸಿದ ಇಮಾಮ್‌ ಮೇಲೆ ಹಲ್ಲೆ ನಡೆಸಿದ್ದರು.

ನಂತರ ಪ್ರಜ್ಞೆ ತಪ್ಪಿಸಲು ರಾಸಾಯನಿಕ ಬೆರೆಸಿದ ಬಟ್ಟೆ ಬಳಸಿದ್ದರು ಎಂದು ಇಮಾಮ್‌ ಹೇಳಿದ್ದಾರೆ. ತಮಗೆ ಎಚ್ಚರವಾದಾಗ ತಮ್ಮ ಗಡ್ಡ ಕತ್ತರಿಸಿರುವುದು ತಿಳಿದು ಬಂತು ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!