ನಮೀಬಿಯಾದಿಂದ ತರಲಾಗಿದ್ದ ಸಾಶಾ ಚೀತಾ ಸಾವು
ಮಧ್ಯಪ್ರದೇಶ: ನಮೀಬಿಯಾದಿಂದ ತರಲಾಗಿದ್ದ ಚೀತಾ ಸಾಶಾ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸೋಮವಾರ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮೀಬಿಯಾದಿಂದ ಸ್ಥಳಾಂತರಗೊಂಡ ಎಂಟು ಚೀತಾಗಳಲ್ಲಿ ನಾಲ್ಕೂವರೆ ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಣು ಚೀತಾ ಇದಾಗಿತ್ತು, ಸೆಪ್ಟೆಂಬರ್ 17 ರಿಂದ ಶಿಯೋಪುರ್ ಜಿಲ್ಲೆಯ ಉದ್ಯಾನವನದಲ್ಲಿ ಇರಿಸಲಾಗಿತ್ತು.
ಚೀತಾ ಸಾಶಾ ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದೆ, ಏಕೆಂದರೆ ಆಕೆಯ ಕ್ರಿಯೇಟಿನೈನ್ ಮಟ್ಟವು ತುಂಬಾ ಹೆಚ್ಚಿತ್ತು” ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್-ವನ್ಯಜೀವಿ) ಜೆಎಸ್ ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ.
ಭಾರತದಲ್ಲಿ 70 ವರ್ಷಗಳ ಹಿಂದೆಯೇ ಅಸ್ತಿತ್ವವನ್ನು ಕಳೆದುಕೊಂಡಿದ್ದ ಚೀತಾಗಳನ್ನು ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಕಳೆದ ವರ್ಷ ತರಲಾಗಿದ್ದ ಮೊದಲ ತಂಡದಲ್ಲಿದ್ದ ಸಾಶಾ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿತ್ತು.
ಕಳೆದ ವರ್ಷದ ಸೆಪ್ಟಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು ಸಾಶಾ ಸೇರಿದಂತೆ ಐದು ವರ್ಷ ಪ್ರಾಯದ ಎರಡು ಚೀತಾಗಳನ್ನು ಕುನೊದಲ್ಲಿ ಬಿಡುಗಡೆಗೊಳಿಸಿದ್ದರು.




