March 11, 2026

ಕುಂದಾಪುರ: ಬೈಕ್ ಗೆ ಕಾರು ಢಿಕ್ಕಿ, ಯುವಕ ಮೃತ್ಯು

0
image_editor_output_image255161147-1679900138456.jpg

ಕುಂದಾಪುರ: ಕುಂಭಾಶಿಯಿಂದ ಕುಂದಾಪುರ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಕುಂಭಾಶಿ ಪಾಕಶಾಲಾ ಸಮೀಪದ ಕಡೆಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಕುಂಭಾಶಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಕಟ್ಟು ನಿವಾಸಿ ಪ್ರಶಾಂತ್ ಹಾಗೂ ಅವರ ಸ್ನೇಹಿತ ವಿಘ್ನೇಶ್ ಕೆಲಸದನಿಮಿತ್ತ ಕುಂದಾಪುರ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಪ್ರಶಾಂತ್ ಪೂಜಾರಿ (25) ತೀವ್ರ ಸ್ವರೂಪದ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!