May 10, 2026

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಮನೆಗೆ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವದಹನ

0
image_editor_output_image-576140483-1679899561718.jpg

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವದಹನವಾಗಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ.

ರಾಗಯ್ಯ ಹಾಗೂ ಶಿಲ್ಪಾ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಮೃತಪಟ್ಟ ದುರ್ದೈವಿ. ದಂಪತಿ ಮನೆಯಲ್ಲಿಯೇ ಬಟ್ಟೆ ಅಂಗಡಿಯನ್ನೂ ಇಟ್ಟುಕೊಂಡಿದ್ದರು.

ಸೋಮವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿತ್ತು.

ಮನೆಯೊಳಗೆ ದಟ್ಟ ಹೊಗೆ ಅವರಿಸಿಕೊಂಡಿದ್ದರಿಂದ ದಂಪತಿ ಮನೆಯಿಂದ ಹೊರಬರಲಾರದೇ ಪರದಾಡಿ ಕೊನೆಗೆ ಬೆಂಕಿಗಾಹುತಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!