May 10, 2026

ದ.ಕ ಜಿಲ್ಲೆಯ 5 ಕ್ಷೇತ್ರಗಳು ಸೇರಿದಂತೆ 124 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

0
image_editor_output_image-1576532486-1679717770545

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸಿದೆ.

ಮೊದಲ ಹಂತದ ಪಟ್ಟಿಯಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಸೇರಿ ದ.ಕ ಜಿಲ್ಲೆಯ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಂಗಳೂರಿನಿಂದ ಯು.ಟಿ. ಖಾದರ್, ಮೂಡುಬಿದಿರೆಯಿಂದ ಮಿಥುನ್ ರೈ, ಬೆಳ್ತಂಗಡಿಯಿಂದ ರಕ್ಷಿತ್ ಸುವರ್ಣ, ಸುಳ್ಯ ಮೀಸಲು ಕ್ಷೇತ್ರದಿಂದ ಕೃಷ್ಣಪ್ಪ ಜಿ, ಕಾರವಾರ ಅಂಕೋಲಾ ಕ್ಷೇತ್ರದಿಂದ ಸತೀಶ್ ಸೈಲ್, ಭಟ್ಕಳದಿಂದ ಮಂಕಾಳ ವೈದ್ಯ, ಹಳಿಯಾಳದಿಂದ ದೇಶಪಾಂಡೆ ಸ್ಪರ್ಧೆ ಮಾಡಲಿದ್ದಾರೆ, ಇನ್ನೂ ಉಡುಪಿ ಜಿಲ್ಲೆಯ ಬೈಂದೂರಿನಿಂದ ಗೋಪಾಲ ಪೂಜಾರಿ, ಕುಂದಾಪುರದಿಂದ ದಿನೇಶ್ ಹೆಗ್ಡೆ, ಕಾಪುದಿಂದ ಸೊರಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

-ಬೆಳ್ತಂಗಡಿ-ರಕ್ಷಿತ್ ಶಿವರಾಮ್ -ಸುಳ್ಯ- ಕೃಷ್ಣಪ್ಪ ಜಿ
-ಮೂಡಬಿದಿರೆ-ಮಿಥುನ್ ಎಮ್. ರೈ.
-ಮಂಗಳೂರು- ಯು.ಟಿ. ಖಾದರ್
-ಬಂಟ್ವಾಳ-ರಮನಾಥ್ ರೈ .ಬಿ

Leave a Reply

Your email address will not be published. Required fields are marked *

error: Content is protected !!