March 11, 2026

ಬಾರೆಬೆಟ್ಟು: SYS SSF ವತಿಯಿಂದ ರಮಲಾನ್ ಕಿಟ್ ಮತ್ತು ಪೂರ್ವ ಸಿದ್ಧತಾ ತರಗತಿ

0
IMG-20230325-WA0000.jpg

ಕೊಲ್ನಾಡು: ಬಾರೆಬೆಟ್ಟು KMJ SYS SSF ಶಾಖೆಗಳ ವತಿಯಿಂದ ನಡೆಸಲ್ಪಟ್ಟ ರಮಲಾನ್ ಸಿದ್ಧತಾ ತರಗತಿ ಹಾಗೂ ಕಿಟ್ ವಿತರಣಾ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನಡೆಯಿತು.

ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ KMJ ಬಾರೆಬೆಟ್ಟು ಶಾಖೆಯ ಅಧ್ಯಕ್ಷರಾದ ಬಹುಮಾನ್ಯರಾದ ಹಸೈನಾರ್ ಮುಸ್ಲಿಯಾರ್ ಉಸ್ತಾದ್ ಪ್ರಾರಂಭಿಸಿದರು. ಕಾರ್ಯಕ್ರಮ ನಿರೂಪಣೆಯೊಂದಿಗೆ ಮಾತನಾಡಿದ SYS ಬಾರೆಬೆಟ್ಟು ಶಾಖೆಯ ಅಧ್ಯಕ್ಷರಾದ ಶರೀಫ್ ಸಅದಿ ಸ್ವಾಗತ ಕೋರಿದರು. ದಾನ ಧರ್ಮಗಳ ಮಹತ್ವ ಮತ್ತು ರಮಲಾನ್ ತಿಂಗಳಲ್ಲಿ ಎಲ್ಲರೂ ಅರಿತಿರಬೇಕಾದ ಪ್ರಮುಖ ಅಂಶಗಳ ಕುರಿತು ಚುಟುಕಾಗಿ SSF ಬಾರೆಬೆಟ್ಟು ಶಾಖೆಯ ಅಧ್ಯಕ್ಷರಾದ ಝಿಯಾದ್ ಸಖಾಫಿ ಅಲ್ ಮಳ್ಹರಿ ಮಾತನಾಡಿದರು.

ಮಂಚಿ ಕಯ್ಯೂರು ಮುದರ್ರಿಸ್ ಸಾಲಿಂ ಸಅದಿ ಉಸ್ತಾದ್ ರಮಲಾನ್ ಪೂರ್ವ ಸಿದ್ಧತಾ ತರಗತಿ ಅತ್ಯಂತ ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಬಳಿಕ ಕೆಲವೊಂದು ಹಿತನುಡಿಗಳೊಂದಿಗೆ ಮಾತನಾಡಿದ ಬಾರೆಬೆಟ್ಟು ಮಸ್ಜಿದ್ ಖತೀಬರಾದ ಮಹಮೂದ್ ಸಹದಿ ಅವರ ಮಾತುಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಕಳೆದ ಹಲವಾರು ವರ್ಷಗಳಿಂದ ನಡೆಸಿ ಬರುತ್ತಿರುವ ಕಿಟ್ ವಿತರಣೆಯು ಈ ವರ್ಷವೂ ಅಲ್ಲಾಹನ ಅನುಗ್ರಹದಿಂದ 29 ಬಡ-ನಿರ್ಗತಿಕ, ಅನಾಥ, ಹೆಣ್ಣು ಮಕ್ಕಳು ಮಾತ್ರವಿರುವ ಕುಟುಂಬಗಳಿಗೆ ವಿತರಿಸಲಾಯಿತು.

ಈ ಕಾರ್ಯಕ್ರಮ ನಡೆಸಲು ಸ್ಥಳದ ಸೌಕರ್ಯ ಏರ್ಪಡಿಸಿಕೊಟ್ಟ SYS ಕಾರ್ಯಕರ್ತರಾದ ಅಬ್ದುಲ್ ರಝಾಕ್ ಮತ್ತು ಕಿಟ್ ವಿತರಣೆಗೆ ಊರಿನ ಮತ್ತು KCF ನ ಅಲ್ಲಾಹನ ಮಮತೆ ಆಗ್ರಹಿಸಿ ಸಹಾಯ ಹಸ್ತ ಚಾಚಿದ ಸಂಘಟನೆಯ ಕರ್ಮಧೀರ ಕಾರ್ಯಕರ್ತರನ್ನು ಕಾರ್ಯಕ್ರಮದುದ್ದಕ್ಕೂ ಪ್ರಾರ್ಥನೆಯೊಂದಿಗೆ ನೆನಪಿಸಲಾಯಿತು. ವೇದಿಕೆಯಲ್ಲಿ ಯೂಸುಫ್ ತಾಳಿತ್ತನೂಜಿ, ರಝಾಕ್ ಅಮ್ಜದಿ, ಸಿದ್ದೀಕ್ ಸಅದಿ, ತಾಜುದ್ದೀನ್ ಮುಸ್ಲಿಯರ್ ಮುಂತಾದ KMJ SYS SSF ನ ಮತ್ತು KCF ನ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಂಘಟನೆಯ ಸಕ್ರಿಯ ಕಾರ್ಯಕರ್ತರೆಲ್ಲರೂ ಪಾಲ್ಗೊಂಡರು.

Leave a Reply

Your email address will not be published. Required fields are marked *

You may have missed

error: Content is protected !!