May 11, 2026

ಕಾಲುವೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

0
Screenshot_2023-03-25-05-10-20-10_680d03679600f7af0b4c700c6b270fe7.jpg

ವಿಜಯಪುರ: ಇಂಡಿ ತಾಲೂಕಿನ ಕಾಲುವೆ ನೀರಿನಲ್ಲಿ ಮುಳುಗಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮಾವಿನಹಳ್ಳಿ ಗ್ರಾಮದ ಕಾಲುವೆಯಲ್ಲಿ ದುರಂತ ಸಂಭವಿಸಿದ್ದು ಮೃತರನ್ನು ಮಾವಿನಹಳ್ಳಿ ಗ್ರಾಮದ ನಿವಾಸಿಗಳಾದ ಭೋಜರಾಜ್ ದಶವಂತ, ರಾಜಕುಮಾರ ದಶವಂತ ಎಂದು ಗುರುತಿಸಲಾಗಿದೆ.

ಮೋಟಾರ್ ದುರಸ್ತಿ ಮಾಡುವ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಕಾಲುವೆಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾ ಅಧಿಕಾರಿಯಾದ ಗುರುಪಾದಪ್ಪ ತೇಲಿ ಅವರ ತಂಡ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!