ಪುತ್ತೂರು: ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾದ ಹೊಚ್ಚ ಹೊಸ ಕಾರು: ಮಹಿಳೆ ಅಪಾಯದಿಂದ ಪಾರು
ಪುತ್ತೂರು : ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಬೈಪಾಸ್ ರಸ್ತೆಯಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಖ್ಯರಸ್ತೆಯ ಪಕ್ಕದ ರಸ್ತೆಗೆ ಪಲ್ಟಿಯಾಗಿದೆ.
ಪಲ್ಟಿಯಾದ ಕಾರು ಹೊಸದಾಗಿದ್ದು, ರಸ್ತೆಗೆ ಮಗುಚಿ ಬಿದ್ದಿದೆ. ಕಾರು ಬಹುತೇಕ ನಜ್ಜು-ಗುಜ್ಜಾಗಿದೆ.
ಘಟನೆಯಲ್ಲಿ ಕಾರು ಮಹಿಳೆಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.




