February 4, 2026

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿಗೆ ಗುರುಬೆಳದಿಂಗಳು ಟ್ರಸ್ಟ್ ವತಿಯಿಂದ ಸುಸಜ್ಜಿತ ಮನೆ ಹಸ್ತಾಂತರ

0
rayan_010323_House20.jpg

ಮಂಗಳೂರು: ನಗರದ ಕಂಕನಾಡಿ ಗರೋಡಿಯ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು, ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಕೊಟ್ಟ ಮಾತಿನಂತೆ ಇಂದು(ಮಾ.22) ಗುರುಬೆಳದಿಂಗಳು ಫೌಂಡೇಶನ್ 6 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಹಸ್ತಾಂತರಿಸಿದೆ.

2022ರ ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿ ಸಮೀಪದ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಕುಕ್ಕರ್​ ಬಾಂಬ್​ ಸ್ಫೋಟವಾಗಿತ್ತು. ಘಟನೆಯಲ್ಲಿ ಗಾಯಗೊಂಡು ಪುರುಷೋತ್ತಮ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಅವರ ಪುತ್ರಿಯ ಮದುವೆ ನಿಶ್ಚಯವಾಗಿದ್ದರಿಂದ, ಪುರುಷೋತ್ತಮ್ ಮನೆಯ ದುರಸ್ತಿ ಕಾರ್ಯವನ್ನ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ ಈ ದುರ್ಘಟನೆ ಬಳಿಕ ಮನೆ ದುರಸ್ತಿಯಾಗದೆ ಕಂಗೆಟ್ಟಿದ್ದರು. ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದಾಗ ಪುರುಷೋತ್ತಮ್ ತಮ್ಮ ನೋವನ್ನು ತೋಡಿಕೊಂಡಿದ್ದರು. ಈ ವೇಳೆ ಗುರು ಬೆಳದಿಂಗಲು ಫೌಂಡೇಶನ್ ಅವರು ಮನೆ ನವೀಕರಿಸುವ ಭರವಸೆ ನೀಡಿದ್ದರು.

ಅದರಂತೆ ಇಂದು ಗುರು ಬೆಳದಿಂಗಲು ಫೌಂಡೇಶನ್ ಕೊಟ್ಟ ಮಾತಿನಂತೆ ಮನೆ ನವೀಕರಣಗೊಳಿಸಿ ಯುಗಾದಿ ಹಬ್ಬದ ಗಿಪ್ಟ್​ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!