ದೂರು ಕೊಡಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತನೆ: ಇನ್‌ಸ್ಪೆಕ್ಟರ್ ಅಮಾನತು
ಬೆಂಗಳೂರು: ದೂರು ಕೊಡಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ.
ಕೊಡಿಗೆಹಳ್ಳಿ ಠಾಣೆ ರಾಜಣ್ಣ ಅಮಾನತುಗೊಂಡು ಇನ್‌ಸ್ಪೆಕ್ಟರ್. ಯುವತಿಯೊಬ್ಬರು ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಆಕೆಯ ನಂಬರ್ ಪಡೆದು ನಂತರ ಅಸಭ್ಯವಾಗಿ ಚಾಟಿಂಗ್ ಮಾಡಿದ್ದ.
ಒಮ್ಮೆ ಯುವತಿಯನ್ನು ಠಾಣೆಗೆ ಕರೆಸಿ ಆಕೆಯ ಕೈಗೆ ಡ್ರೈಫ್ರೂಟ್ಸ್ ಇದ್ದ ಬಾಕ್ಸ್ ಕೊಟ್ಟು ರೂಮಿಗೆ ಕರೆದಿದ್ದ. ಇದರಿಂದ ಬೇಸರಗೊಂಡ ಯುವತಿ ಸಾಕ್ಷಿ ಸಮೇತ ಡಿಸಿಪಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಾಥಮಿಕ ತನಿಖೆಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಆದೇಶಿಸಿದ್ದರು. ಯಲಹಂಕ ಎಸಿಪಿಗೆ ತನಿಖೆಗೆ ಸೂಚಿಸಿದ್ದರು. ನಂತರ ಎಸಿಪಿ ವರದಿಯನ್ನ ಪಡೆದು ಪೊಲೀಸ್ ಕಮಿಷನರ್‌ಗೆ ರವಾನಿಸಿದ್ದರು.




