ವಿಟ್ಲ: 2ನೇ ವಾರ್ಡ್ ಐಟಿಐ ಮತ್ತು ಡಿಗ್ರಿ ಕಾಲೇಜ್ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ
ವಿಟ್ಲ: ನಗರೋತ್ಥಾನ ಮತ್ತು ನೀರಾವರಿ ಮಂಡಳಿಯಡಿ ಬಿಡುಗಡೆಗೊಂಡ 19 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ 2ನೇ ವಾರ್ಡ್ ನ ವಿಟ್ಲ ಐಟಿಐ ಮತ್ತು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನಡೆಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗೀತಾ ಪಾಣೆಮಜಲು, ಅರುಣ್ ಎಂ ವಿಟ್ಲ, ಹರೀಶ್ ಸಿ.ಎಚ್, ಪ್ರಮುಖರಾದ ಹರೀಶ್ ಸೀಗೆಬಲ್ಲೆ, ರಾಮ್ದಾಸ್ ಶೆಣೈ, ಜಗದೀಶ ಪಾಣೆಮಜಲು, ಜಗನ್ನಾಥ್ ಶೆಟ್ಟಿ ಕೋಡಿ, ಶಂಕರ ಸೀಗೆಬಲ್ಲೆ, ಜಯರಾಮ ಉಪಸ್ಥಿತರಿದ್ದರು.




