April 3, 2025

ದುಬೈ: ಲೊರೆಟ್ಟೊ ಫ್ರೆಂಡ್ಸ್ ವತಿಯಿಂದ “ಯುಎಇ ಟ್ರೋಫಿ -2023”

0

ದುಬೈ: ಮೆಗಾ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಲೊರೆಟ್ಟೊ ಫ್ರೆಂಡ್ಸ್ UAE ಇವರ ಆಶ್ರಯದಲ್ಲಿ ” Loretto friends ಯುಎಇ ಟ್ರೋಫಿ -2023″ ಮಾರ್ಚ್ 12 ರಂದು ದುಬೈಯ ಓವಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಎಂಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.
ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಟವು ದುಬೈಯಲ್ಲಿ ನೆಲೆಸಿರುವ ಮಂಗಳೂರು ಮತ್ತು ಉಡುಪಿ ವಲಯದ ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.

ಲೊರೆಟ್ಟೊ ಫ್ರೆಂಡ್ಸ್ ಯುಎಇ ಇದರ ಕೋರ್ ಕಮಿಟಿ ಸದಸ್ಯರು ಪ್ರಾರ್ಥಿಸಿದರು. ಪಂದ್ಯಾವಳಿಯನ್ನು ಸಂಯೋಜಕರಾದ ರೋಶನ್ ನೊರೋನ್ಹಾ, ಕೋಶಾಧಿಕಾರಿ ಅರುಣ್ ಬರ್ಬೋಜಾ, ಕೋರ್ ಕಮಿಟಿ ಸದಸ್ಯರುಗಳಾದ ರೂಪೇಶ್ ಪಿಂಟೋ, ರಾಯ್ ಡಿಸೋಜಾ, ವಿನೋದ್ ಪಿಂಟೋ, ಸಚಿನ್ ನೊರೋನ್ಹಾ, ಪ್ರಸನ್ನ ವಿನೋದ್ ಪಿಂಟೋ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡೆಸ್ಮಂಡ್ ನೊರೊನ್ಹಾ, ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್ ಮತ್ತು ಶ್ರೀಮತಿ ಸೋನಾಲಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋರ್ ಕಮಿಟಿ ಸದಸ್ಯ ಡೊನಾಲ್ಡ್ ನೊರೊನ್ಹಾ ಉದ್ಘಾಟನಾ ಕಾರ್ಯಕ್ರಮ ನಿರೂಪಿಸಿದರು.
ಲೀಗ್ ಪಂದ್ಯಗಳು ವಿನೋದ್ ಪಿಂಟೋ ಮತ್ತು ಡೆಸ್ಮಂಡ್ ನೊರೊನ್ಹಾ ಅವರ ನೇತೃತ್ವದಲ್ಲಿ ಓವಲ್ ಕ್ರಿಕೆಟ್ ಕ್ರೀಡಾಂಗಣ ಮತ್ತು MCC ಟರ್ಫ್ ಮೈದಾನದಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು.

ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡಗಳು ಮೆಚ್ಚುಗೆವ್ಯಕ್ತಪಡಿಸಿದರು.
ಡಿಜೆ ನಾರ್ಮನ್ ಮತ್ತು ಡಿಜೆ ಡೆಲಾನ್ ಲೋಬೊ ಅವರು ದಿನವಿಡೀ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ರಾಡ್‌ವೇ ಈವೆಂಟ್ಸ್ & ಪ್ರೊಡಕ್ಷನ್ ನ ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿಬಂದ ಕಾರ್ಯಕ್ರಮದ ಉತ್ಸಾಹ ಭರಿತ ಕ್ಷಣಗಳನ್ನು ಲವ್ಲಿನ್ DIMELLO ಆವರು ಸೆರೆಹಿಡಿದರು.
——+++
ಪ್ರಶಸ್ತಿ ಪ್ರದಾನ

 

 

ಸಂಜೆ ಅನೇಕ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ದುಬೈಯ ರೆಸಾರ್ಟ್ ಸಪ್ಲೈಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ವಾಸ್,ಟ್ರುಸಪ್ಲೈ ಜನರಲ್ ಟ್ರೇಡಿಂಗ್ ಮತ್ತು ಲೇಟನ್ ಶಿಪ್ಪಿಂಗ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜಾನ್ ಲ್ಯಾನ್ಸಿ ಡಿಸೋಜಾ,ಟ್ರಾನ್ಸ್‌ವಿಲ್ ಫೇಡ್ ಆಕ್ಸೆಸ್ ಕ್ರೇಡಲ್ಸ್ ಮತ್ತು ವಿಲ್ಸ್ ರೆಸ್ಟೋರೆಂಟ್ ದುಬೈ ಇದರ ವ್ಯವಸ್ಥಾಪಕ‌ ನಿರ್ದೇಶಕ ವಿಲ್ಫ್ರೆಡ್ ಥಾಮಸ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕೋರ್ ಕಮಿಟಿ‌ಸದಸ್ಯ ಲಾಯ್ಡ್ ರೋಡ್ರಿಗಸ್ ವಂದಿಸಿದರು.
ಡೇವಿಡ್ ನೊರೊನ್ಹಾ ಸಮಾರೋಪ ಕಾರ್ಯಕ್ರಮ ನಿರೂಪಿಸಿದರು.

ವಿಜೇತರು: ಲೇಟನ್ ತಂಡ ಎಬಿ
ರನ್ನರ್ ಅಪ್: ಕ್ಯಾಥೋಲಿಕ್ ಸನ್ಶೈನ್
ಅತ್ಯುತ್ತಮ ಬ್ಯಾಟ್ಸ್‌ಮನ್: ಟೈಸನ್ ವಿಲ್ಸನ್ ರೆಬೆಲ್ಲೊ (ಲೇಟನ್ ಟೀಮ್ ಎಬಿ)
ಅತ್ಯುತ್ತಮ ಬೌಲರ್: ಸುದೀಶ್ ಸಲ್ಡಾನ್ಹಾ (ಲೇಟನ್ ಟೀಮ್ ಎಬಿ)
ಪಂದ್ಯದ ಅಂತಿಮ ಆಟಗಾರ: ನೆಷ್ಟನ್ ಶರಣ್ ಪಿಂಟೊ (ಲೇಟನ್ ತಂಡ ಎಬಿ)
ಪಂದ್ಯಾವಳಿಯ ಆಟಗಾರ: ನೆಲ್ಸನ್ ಸಂತೋಷ್ ಫೆರ್ನಾಂಡಿಸ್ (ಕ್ಯಾಥೋಲಿಕ್ ಸನ್ಶೈನ್)

Leave a Reply

Your email address will not be published. Required fields are marked *

error: Content is protected !!