March 12, 2026

ಕೊಣಾಜೆ: ರಸ್ತೆ ಬದಿಯ ಗುಡ್ಡ ಪ್ರದೇಶಕ್ಕೆ ಬೆಂಕಿ ಅವಘಡ: ದಟ್ಟವಾದ ಹೊಗೆ ಆವರಿಸಿ ಎರಡು ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ

0
IMG-20250403-WA0005.jpg

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ವಸತಿ ನಿಲಯದ ಬಳಿಯ ರಸ್ತೆ ಬದಿಯ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ರಸ್ತೆಯುದ್ದಕ್ಕೂ ದಟ್ಟವಾದ ಹೊಗೆಯು ಆವರಿಸಿ ಎರಡು ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಕೊಣಾಜೆಯಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಹಾಗೂ ಇನೋಳಿಗೆ ತೆರಳುವ ಖಾಸಗಿ ಕಾಲೇಜಿನ ಬಸ್ ಗಳ‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು,‌ ಎರಡು ಬಸ್ಸಿನ ಚಾಲಕರು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿವೆ.

ಕೊಣಾಜೆಯ ವಿಶ್ವವಿದ್ಯಾಲಯದ ಬಳಿ ರಸ್ತೆಯ ಬದಿಯ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ಗಿಡಗಂಟಿಗಳು ಬೆಂಕಿಗಾಹುತಿಯಾಗಿ ದಟ್ಟವಾದ ಹೊಗೆಯು ಪರಿಸರದಲ್ಲಿ ಆವರಿಸಿತ್ತು. ಅಲ್ಲದೆ ರಸ್ತೆಯ ಉದ್ದಕ್ಕೂ ಬೆಂಕಿಯ ಕೆನ್ನಾಲೆಯೊಂದಿಗೆ ಹೊಗೆಯೂ ಆವರಿಸಿದ ಪರಿಣಾಮ ವಾಹನ ಸವಾರರಿಗೂ ತೊಂದರೆಯಾಗಿತ್ತು. ಇದರ ನಡುವೆ ಎರಡು ಕಡೆಯಿಂದ ಬರುವ ಬಸ್ ನ ಚಾಲಕರಿಗೆ ಕಾಣದೆ ಪರಸ್ಪರ ಢಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ಎರಡು ಬಸ್ ಗಳ ಮುಂಭಾಗವು

ಕೊಣಾಜೆ ಪರಿಸರದ ಮಂಗಳೂರು ವಿವಿ ಕ್ಯಾಂಪಸ್ ನ ಗುಡ್ಡ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಗುಡ್ಡಕ್ಕೆ ಬೆಂಕಿ‌ ಬಿದ್ದು ನೂರಾರು ಗಿಡಮರಗಳು ನಾಶವಾಗಿವೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಪ್ರತೀ ಬೇಸಿಗೆಯಲ್ಲಿ ವರ್ಷಕ್ಕೆ ಹಲವಾರು ಬಾರಿ ಕಿಡಿಗೇಡಿಗಳ ಕೃತ್ಯದಿಂದ ಈ ಭಾಗದ ಗುಡ್ಡ ಪ್ರದೇಶಕ್ಕೆ ಬೆಂಕಿ ಹಿಡಿಯುತ್ತಿದ್ದು,‌ ಪ್ರತೀ ವರ್ಷ ಸಾವಿರಾರು ಮರಗಿಡಗಳು ಬೆಂಕಿಗಾಹುತಿಯಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!