ಲಾಡ್ಜ್‌ನಲ್ಲಿ ಪ್ರೇಯಸಿಯನ್ನು ಕೊಲೆಗೈದ ಪ್ರಿಯಕರ
ಬೆಂಗಳೂರು: ಲಾಡ್ಜ್‌ಗೆ ತೆರಳಿದಾಗ ಗಲಾಟೆಯಾಗಿ ಪ್ರೇಯಸಿಯನ್ನು ಮೇಲಿಂದ ತಳ್ಳಿ ಪ್ರಿಯಕರ ಕೊಲೆ ಮಾಡಿರುವ ಘಟನೆ ನಗರದ ಅಬ್ಬಿಗೆರೆ ವೈಮ್ಯಾಕ್ಸ್ ಸರ್ಕಲ್‌ನಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಹಾಸನ ಜಿಲ್ಲೆಯ ಐಶ್ವರ್ಯ ಎನ್ನಲಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ಐಶ್ವರ್ಯ ಹಾಗೂ ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಐಶ್ವರ್ಯ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಳು. ಆದರೆ ಸಂತೋಷ್‌ಗೆ ಐಶ್ವರ್ಯಳನ್ನು ಮದುವೆಯಾಗೋಕೆ ಇಷ್ಟ ಇರಲಿಲ್ಲ. ಕಳೆದ ಮೂರು ವರ್ಷದಿಂದಲೂ ಮದುವೆ ವಿಚಾರವನ್ನು ಮುಂದಕ್ಕೆ ಹಾಕಿಕೊಂಡು ಬರುತ್ತಿದ್ದ. ಇದೇ ವಿಚಾರ ಮಾತಾಡೋಕೆ ಅಂತ ನ.19ರಂದು ಪ್ರಿಯಕರ ಸಂತೋಷ್‌ನನ್ನು ಐಶ್ವರ್ಯ ಲಾಡ್ಜ್‌ಗೆ ಕರೆದಿದ್ದಳು.




