November 24, 2026

ವಿಟ್ಲ ಸರಕಾರಿ ಪ್ರೌಢಶಾಲೆ RMSA ವಿಟ್ಲ ಇದರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0
image_editor_output_image-1177878375-1795502607395

ವಿಟ್ಲ ಸರಕಾರಿ ಪ್ರೌಢಶಾಲೆ RMSA ವಿಟ್ಲ ಇದರ ವಾರ್ಷಿಕ ಕ್ರೀಡಾಕೂಟ 2026-27 ಇದರ ಉದ್ಘಾಟನೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ವಿಟ್ಲ ಇವರು ನೆರವೇರಿಸಿದರು. ನಿವೃತ್ತ P D ಸೇಸಪ್ಪ ಗೌಡ ಗೌರವ ವಂದನೆ ಸ್ವೀಕರಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಧ್ವಜಾರೋಹಣ ಮಾಡಿದರು. ಹೈಸ್ಕೂಲ್ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ನವೀನ್ ಅಧ್ಯಕ್ಷತೆ ವಹಿಸಿದ್ದರು. ತುಳಸಿದಾಸ್ ಶೆಟ್ಟಿ, ಪ್ರಾಥಮಿಕ ವಿಭಾಗದ ಉಪಾಧ್ಯಕ್ಷೆ ವಿಶಾಲಾಕ್ಷಿ, ಹೈಸ್ಕೂಲ್ ಮುಖ್ಯ ಶಿಕ್ಷಕಿ ಫೆಲ್ಸಿಟಾ ಇವಾ ಗಲಬಾವೊ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಾರಿಜ, ದೈಹಿಕ ಶಿಕ್ಷಕ ವಿದ್ಯಾಶಂಕರ್, ರವಿವರ್ಮ, ರಾಜೇಶ್, ಇತರ ಎಸ್ ಡಿ ಎಂ ಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ವಿದ್ಯಾರ್ಥಿಗಳಾದ ಧನ್ವಿ ಮತ್ತು ವರ್ಷಾ ಇವರನ್ನು ಗೌರವಿಸಲಾಯಿತು.


ಸೀಮಾ ಸ್ವಾಗತಿಸಿದರು. ದೈಹಿಕ ಶಿಕ್ಷಕ ರಾಜೇಶ್ ಪ್ರಸ್ತಾಪಿಸಿದರು. ಚಿಂತನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಧನ್ವಿ ಕೆ ವಂದಿಸಿದರು. ಶಿಕ್ಷಕ ಜಗದೀಶ್ ನಿರೂಪಿಸಿದರು. ದೈಹಿಕ ಶಿಕ್ಷಕಿ ಶ್ವೇತಾ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!