November 24, 2026

ಕಾಸರಗೋಡು: ಅಂತರ್‌ರಾಜ್ಯ ಕಳವು ಆರೋಪಿಯ ಬಂಧನ

0
image_editor_output_image-1898360417-1795500502537

ಕಾಸರಗೋಡು: ಅಂತರ್‌ರಾಜ್ಯ ಕುಖ್ಯಾತ ರೈಲು ಕಳ್ಳರ ತಂಡದ ನಾಯಕನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿಂದ ಸುಮಾರು 13.74 ಲಕ್ಷ ರೂ. ಮೌಲ್ಯದ 119.86 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರಿಯಾಣದ ಹಿಸಾರ್ ಜಿಲ್ಲೆಯ ಭಟ್ಟೋಲ್ ರಂಗ್ರಾನ್ ನಿವಾಸಿ ದಿಲ್ಬಾಗ್ (63) ಬಂಧಿತ ಆರೋಪಿ.

ನ.21ರಂದು ಮಧ್ಯಾಹ್ನ ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾಮ್‌ನಿಂದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಸಂಶಯಾಸ್ಪದ ವಾಗಿ ಕಂಡುಬಂದ ಈತನನ್ನು ಗಮನಿಸಿ ವಿಚಾರಿಸಿದಾಗ ತದ್ವಿರುದ್ಧ ಹೇಳಿಕೆ ನೀಡಿದ್ದು, ಈತನ ಬಳಿ ಇದ್ದ ಚೀಲವನ್ನು ತಪಾಸಣೆ ನಡೆಸಿದಾಗ ಬಟ್ಟೆಗಳ ನಡುವೆ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟು ಅಡಗಿಸಿಟ್ಟಿದ್ದ ಮೂರು ಚಿನ್ನದ ಬಳೆಗಳು, ಎರಡು ಸರಗಳು, ಕಿವಿಯೋಲೆಗಳು, ಉಂಗುರ ಮತ್ತು ಮಂಗಳಸೂತ್ರ ಪತ್ತೆಯಾಗಿವೆ. ಚಿನ್ನಾಭರಣಗಳ ಮೂಲದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲನಾದ ಈತನ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿದಾಗ ಈತ ಇನ್ನಿತರ ಪ್ರಕರಣಗಳು ಈತನೇ ಮೇಲೆ ಇರುವುದು ಗಮನಕ್ಕೆ ಬಂದಿದೆ.

2025ರ ನವೆಂಬರ್‌ನಲ್ಲಿ ಚೆನ್ನೈ–ಮಂಗಳೂರು ಮೇಲ್ ರೈಲಿನಲ್ಲಿ ಪ್ರಯಾಣಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಕಳವು ಮಾಡಿದ ಪ್ರಕರಣಗಳಲ್ಲಿ ಶೋರ್ನೂರು ಮತ್ತು ಕೋಝಿಕ್ಕೋಡು ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಈತ ಮೊದಲ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ. ವಶಪಡಿಸಿಕೊಂಡ ಚಿನ್ನಾಭರಣಗಳು ಕಳವು ಮಾಡಿದ್ದವು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!