ಕತಾರ್ ನೂತನ ಪ್ರಧಾನಿಯಾಗಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ನೇಮಕ

ದೋಹಾ: ಕತಾರ್‌ನ ಉನ್ನತ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಅವರು ಮಂಗಳವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಎಂದು ಸ್ಟೇಟ್ ನ್ಯೂಸ್ ವರದಿ ಮಾಡಿದೆ.
ಶೇಖ್ ಮಹಮ್ಮದ್ 2016ರಿಂದ ವಿದೇಶಾಂಗ ಸಚಿವರಾಗಿದ್ದರು. ಇದಕ್ಕೂ ಮುನ್ನ ಶೇಖ್ ಖಾಲೀದ್ ಬಿನ್ ಅಬ್ದುಲ್ ಅಝೀಝ್ ಅಲ್ ಥಾನಿ ಅವರು 2020ರಿಂದ ಪ್ರಧಾನಿಯಾಗಿದ್ದರು.
ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ಸಾಮಾನ್ಯವಾಗಿ ರಾಜಮನೆತನದ ಸದಸ್ಯರನ್ನೇ ಉನ್ನತ ಹುದ್ದೆಗಳಿಗೆ ನೇಮಕ ಮಾಡುತ್ತಾರೆ.