August 12, 2026

ಉಮ್ರಾ ಯಾತ್ರೆಗೆ ತೆರಳಿದ್ದ ವಿಟ್ಲ ಮೂಲದ ವ್ಯಕ್ತಿ ಮೃತ್ಯು

0
image_editor_output_image-1832673832-1678868816612.jpg

ವಿಟ್ಲ: ಉಮ್ರಾ ಯಾತ್ರೆಗೆ ತೆರಳಿದ್ದ ವ್ಯಕ್ತಿಯೋರ್ವರು ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ವಿಟ್ಲ ಕೊಳಂಬೆ ನಿವಾಸಿ ಹಸನಬ್ಬ ಅವರು ಮೃತರು.ಅವರು ಕಳೆದ ವಾರ ಕುಟುಂಬಸ್ಥರ ಜೊತೆ ಉಮ್ರಾ ಯಾತ್ರೆ ನಿರ್ವಹಿಸಲು ಸೌದಿ ಅರೇಬಿಯಾಗೆ ತೆರಳಿದ್ದರು.ಆದರೆ ನಿನ್ನೆ
ಸೌದಿ ಅರೇಬಿಯಾದ ಬುರೈದದಲ್ಲಿ ಮೃತಪಟ್ಟಿದ್ದಾರೆ.

ಮಗನ ರೂಂನಲ್ಲಿ ಮಲಗಿದ್ದ ಹಸನಬ್ಬ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಅವರು ಪತ್ನಿ ಮತ್ತು ಮಕ್ಕಳ ಜೊತೆ ಸೌದಿಗೆ ತೆರಳಿ ಉಮ್ರಾ ನಿರ್ವಹಿಸುವ ಉದ್ದೇಶವನ್ನು ಹೊಂದಿದ್ದರು.ಇದೀಗ ಅವರ ಅಕಾಲಿಕ ಮರಣದಿಂದ ಕುಟುಂಬಸ್ಥರಲ್ಲಿ ದುಃಖ ಉಂಟು ಮಾಡಿದೆ. ಈ‌ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!