March 21, 2026

ಕಾಪು: ಕಾಂಗ್ರೆಸ್ ಪಕ್ಷದ ಬ್ಯಾನರ್‌ ಹರಿದು ಹಾಕಿದ ಕಿಡಿಗೇಡಿಗಳು

0
image_editor_output_image213527025-1678534430826.jpg

ಉಡುಪಿ: ಚುನಾವಣಾ ಕಾವು ಏರುತ್ತಿರುವ ಹೊತ್ತಲ್ಲೆ ಉಡುಪಿಯ ಕಾಪು ವಿಧಾನಸಬಾ ಕ್ಷೇತ್ರದಲ್ಲಿ ಬ್ಯಾನರ್ ವಾರ್ ಜೋರಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರಚಾರಾರ್ಥ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ನ ಪ್ರಚಾರಾರ್ಥವಾಗಿ ಕಾಪು ವಿಧಾಸಭಾ ವ್ಯಾಪ್ತಿಯ ರಾಜೀವ ನಗರ ಭಾಗದಲ್ಲಿ ಪ್ರಚಾರದ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಆದರೆ ಶನಿವಾರ ತಡರಾತ್ರಿ ಈ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಇನ್ನು ಬ್ಯಾನರ್ ಹರಿದು ಹಾಕುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಶನಿವಾರ ತಡರಾತ್ರಿ ಸುಮಾರು 12.30 ರ ವೇಳೆಗೆ ಬ್ಯಾನರ್‌ ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ.

ಕಾಪುವಿಗಾಗಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನ ಚುನಾವಣಾ ಭರವಸೆಗಳಾದ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮುಂತಾದ ಕಾರ್ಯಕ್ರಮಗಳ ವಿಚಾರಗಳನ್ನು ಈ ಬ್ಯಾನರ್ ಗಳಲ್ಲಿ ಹಾಕಲಾಗಿತ್ತು.

Leave a Reply

Your email address will not be published. Required fields are marked *

error: Content is protected !!