ಕಾಸರಗೋಡು: ಸಮುದ್ರ ಪಾಲಾಗಿದ್ದ ಮಧ್ಯ ಪ್ರದೇಶ ಮೂಲದ ಕಾರ್ಮಿಕನ ಮೃತ ದೇಹ ಪತ್ತೆ
ಕಾಸರಗೋಡು: ಕಿಯೂರುನಲ್ಲಿ ಸಮುದ್ರ ಪಾಲಾಗಿದ್ದ ಮಧ್ಯ ಪ್ರದೇಶ ಮೂಲದ ಕಾರ್ಮಿಕ ನ ಮೃತ ದೇಹ ಶನಿವಾರ ಪತ್ತೆಯಾಗಿದೆ.
ಮಧ್ಯಪ್ರದೇಶ ದ ಅಜಯ್ ರಾಥೋಡ್ (26) ಮೃತ ಪಟ್ಟವರು.
ಮಾರ್ಬಲ್ ಕಾರ್ಮಿಕನಾಗಿದ್ದ ಅಜಯ್ ರಾಥೋಡ್ ಬುಧವಾರ ಸಂಜೆ ಕಿಯೂರಿನ ನಲ್ಲಿ ಸ್ನಾನಕ್ಕಿಳಿ ದ ಸಂದರ್ಭದಲ್ಲಿ ಸಮುದ್ರ ಪಾಲಾಗಿದ್ದರು. ಜೊತೆಯಲ್ಲಿದ್ದ ನಾಲ್ವರು ಪಾರಾಗಿದ್ದರು. ಅಗ್ನಿ ಶಾಮಕ ದಳ, ಕರಾವಳಿ ಪೊಲೀಸ್ ಪಡೆ, ಮೀನುಗಾರರು, ನಾಗರಿಕರು ಶೋಧ ನಡೆಸಿದ್ದರು. ಈ ನಡುವೆ ಚೆಂಬರಿಕ ಕಡಲ ಕಿನಾರೆಯಲ್ಲಿ ಶನಿವಾರ ಮೃತ ದೇಹ ಪತ್ತೆಯಾಗಿದೆ.




