May 14, 2026

ದುಬೈನಿಂದ ಬಂದಿದ್ದ ಗಗನಸಖಿ ಆತ್ಮಹತ್ಯೆ

0
image_editor_output_image-1022939756-1678533852219.jpg

ಬೆಂಗಳೂರು: ತನ್ನ ಬಾಯ್ ಫ್ರೆಂಡ್ಸ್ ಅನ್ನು ನೋಡಲು ದುಬೈನಿಂದ ಬಂದಿದ್ದ ಗಗನಸಖಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಕೋರಮಂಗಲ ದಲ್ಲಿ ನಡೆದಿದೆ.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕೋರಮಂಗಲ 8ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಅರ್ಚನಾ (28) ಎಂದು ಗುರತಿಸಲಾಗಿದೆ.

ರೇಣುಕಾ ರೆಸಿಡೆನ್ಸಿಯ 4ನೇ ಮಹಡಿಯಿಂದ ಬಿದ್ದು ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಈಕೆ ಬೆಂಗಳೂರಿಗೆ ಬಂದಿದ್ದಳು. ಶುಕ್ರವಾರ ರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದ್ದು, ಯುವಕನೇ ಮೇಲಿಂದ ತಳ್ಳಿರೋ ಸಾಧ್ಯತೆ ಇದೆ ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಬಾಯ್ ಪ್ರೇಂಡ್‍ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!