ಮಂಜೇಶ್ವರ: ಸರಕಾರದ ಆದೇಶ ಉಲ್ಲಂಘನೆ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ನಿರಾಕರಿಸಿದ ನಿರ್ವಾಹಕ
ಮಂಜೇಶ್ವರ: ಕನಾ೯ಟಕ ರಾಜ್ಯದ ರಸ್ತೆ ಸಾರಿಗೆ ಬಸ್ ಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ನೀಡಲು ಸರಕಾರ ಸುತ್ತೊಲೆ ಹೊರಡಿಸಿದ್ದರೂ ಇದನ್ನು ದಿಕ್ಕರಿಸಿ ವಿದ್ಯಾರ್ಥಿಗಳಿಗೆ ನಿರ್ವಾಹಕ ಉಚಿತ ಪ್ರಯಾಣ ನಿರಾಕರಿಸಿದ ಘಟನೆ ಮಂಜೇಶ್ವರದ ಹೊಸ್ಸಂಗಡಿಯಲ್ಲಿ ನಡೆದಿದೆ.
ಉಳ್ಳಾಲದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳು ಪೂರ್ಣ ದರವನ್ನು ಪಾವತಿಸಿದ ಘಟನೆ ನಡೆದಿದೆ. ಇಂದು ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆ ಆರಂಭಗೊಂಡಿತು. ಈ ಹಿನ್ನಲೆಯಲ್ಲಿ ವಿದ್ಯಾಥಿ೯ಗಳು ಪರೀಕ್ಷಾ ಹಾಲ್ ಟಿಕೇಟ್ ಹಾಗೂ ಸಾರಿಗೆ ಇಲಾಖೆಯ ಆದೇಶವನ್ನು ನಿರ್ವಾಹಕ ನಿಗೆ ತೋರಿಸಿದರೂ ಟಿಕೇಟ್ ನೀಡುವುದಿಲ್ಲವಾದರೇ ಕೆಳಗೆ ಇಳಿಯಿರಿ ಎಂದು ಹೇಳಿ ವಿದ್ಯಾಥಿ೯ಗಳನ್ನು ಹೊರದಬ್ಬಲು ಯತ್ನಿಸಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಜನಜಾಗ್ರತಿ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ದೂರು ನೀಡಿದೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಯೊಬ್ಬರು ಅಂತಾರಾಜ್ಯ ವಿದ್ಯಾರ್ಥಿಗಳಿಗೆ ಸರಕಾರದ ಆದೇಶದಂತೆ ಪ್ರಯಾಣಿಸಲು ಅವಕಾಶವಿದ್ದು, ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಈ ರೀತಿಯ ಘಟನೆ ನಡೆದಿದೆ ಎಂದು ಹೇಳಿದ್ದಾರೆ.




