February 3, 2026

ಹೋಳಿ ಬಣ್ಣ ಎರಚಬೇಡಿ ಎಂದ ಮಹಿಳೆಯನ್ನು ಕೊಂದ ಯುವಕರ ಗುಂಪು

0
image_editor_output_image-854973303-1678354324998.jpg

ಜಾರ್ಖಂಡ್: ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಯುವಕರ ಗುಂಪೊಂದು ಥಳಿಸಿ ಸಾಯಿಸಿದ ದಾರುಣ ಘಟನೆ ನಡೆದಿದೆ.

ಹೋಳಿ ಆಚರಣೆಯ ಸಂದರ್ಭದಲ್ಲಿ ಪಾನಮತ್ತ ಯುವಕರ ಗುಂಪು ಈ ದುಷ್ಕೃತ್ಯ ಎಸಗಿದೆ. ಬುಧವಾರ ಬಲಬದ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಘಟನೆ ನಡೆದಿದೆ.

ಹೋಳಿ ಬಣ್ಣದಾಟದ ಸಮಯದಲ್ಲಿ ಬಲವಂತವಾಗಿ ಬಣ್ಣ ಎರಚುವುದನ್ನು ವಯಸ್ಸಾದ ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕರು ಆಕೆಯನ್ನು ಥಳಿಸಿದ್ದರಿಂದ ಆಕೆ ಮೃತಪಟ್ಟಿದ್ದಾರೆ.

ಮೃತರನ್ನು ದುಚ್ಚಿ ದೇವಿ ಎಂದು ಗುರುತಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!