March 21, 2026

ಕುಂದಾಪುರ: ಡಾಬಾದೊಳಗೆ ನುಗ್ಗಿದ ಟಿಪ್ಪರ್ ಲಾರಿ: ಗ್ರಾಹಕನಿಗೆ ಗಂಭೀರ ಗಾಯ

0
santu-13.2.23-acdntkndprt.jpg

ಕುಂದಾಪುರ: ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಲಾರಿಯೊಂದು ಹೋಟೆಲ್ ಗೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಾವಿನಕಟ್ಟೆ ಕ್ರಾಸ್ ನಲ್ಲಿ ಸಂಭವಿಸಿದೆ.

ಗಾಯಗೊಂಡವರನ್ನು ಮಾವಿನಕಟ್ಟೆ ನಿವಾಸಿ ಅಬಿದ್ದಿನ್ ಸಾಹೇಬ್ ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಗುಲ್ವಾಡಿ ಕಡೆಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಮಹಮ್ಮದ್ ಹನೀಫ್ ಅವರು ನಡೆಸುತ್ತಿದ್ದ ಫ್ಯಾಮಿಲಿ ಡಾಬಾದೊಳಗೆ ಟಿಪ್ಪರ್ ನುಗ್ಗಿದೆ ಎನ್ನಲಾಗಿದೆ.

ಇದರಿಂದ ಮಾಲಕ ಹನೀಫ್ ಹಾಗೂ ಅವರ ಮಗ ನಿಝಾಮುದ್ದೀನ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹೋಟೆಲ್ ನಲ್ಲಿದ ಹಲವು ಸ್ವತ್ತುಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!