ವಿಟ್ಲ: ‘MAS TRADERS’ ಗೃಹ ನಿರ್ಮಾಣ ವಸ್ತುಗಳ ಮಳಿಗೆ ಶುಭಾರಂಭ
ವಿಟ್ಲ: ವಿಟ್ಲ- ಕಾಸರಗೋಡು ರಸ್ತೆಯ ಅಡ್ಯನಡ್ಕ ಸಮೀಪದ ಮರಕ್ಕಿನಿಯಲ್ಲಿ ನೂತನವಾಗಿ MAS TRADERS (ಗೃಹ ನಿರ್ಮಾಣ ವಸ್ತುಗಳ ಮಳಿಗೆ) ಶುಭಾರಂಭಗೊಂಡಿತು.





ಬೆಳಿಗ್ಗೆ ಮೀರ್ ಝಾಹಿದ್ ಅಲ್ ಬುಖಾರಿ ತಂಙಳ್ ಮಂಜೇಶ್ವರ, ಅಡ್ಯನಡ್ಕ ಮುದರಿಸ್ ಹೈದರ್ ದಾರಿಮಿ, ಅಡ್ಕಸ್ಥಳ ಮುದರ್ರಿಸ್ ಅಲ್ ಹಾಜಿ ಅಬ್ದುಲ್ ರಝಾಕ್ ಮಿಸ್ ಬಾಯಿ ದುವಾಃ ಮೂಲಕ ಚಾಲನೆ ನೀಡಿದರು.
ಮಾಲಕರಾದ ಮಹಮ್ಮದ್ ಅಶ್ರಪ್ ಸಂಸ್ಥೆಯ ಬಗ್ಗೆ ಅತಿಥಿಗಳಿಗೆ ವಿವರಿಸಿದರು. ಇಲ್ಲಿ ಗೃಹ ನಿರ್ಮಾಣಕ್ಕೆ ಮತ್ತು ನವೀಕರಣಕ್ಕೆ ಬೇಕಾದ ಎಲ್ಲ ವಸ್ತುಗಳು ಇಲ್ಲಿ ದೊರೆಯಲಿದೆ. ಉತ್ತಮ ಗುಣಮಟ್ಟ ಮತ್ತು ವೈಶಿಷ್ಟತೆಯನ್ನು ಹೊಂದಿದೆ. ಅಡ್ಯನಡ್ಕ, ಪೆರುವಾಯಿ, ಮಾಣಿಲ, ಕುದ್ದುಪದವು ಮತ್ತು ಕೇರಳ ಗಡಿ ಭಾಗದ ಜನರು ಮನೆ ನಿರ್ಮಾಣದ ಸಾಮಗ್ರಿಗಳಿಗೆ ವಿಟ್ಲ, ಪುತ್ತೂರು ಭಾಗಗಳಿಗೆ ತೆರಳಬೇಕಾಗುವ ಅನಿವಾರ್ಯತೆ ಇದ್ದು, ಇದೀಗ ಮರಕ್ಕಿನಿಯಲ್ಲಿ ಸುಸಜ್ಜಿತ ಮಳಿಗೆ ನಿರ್ಮಾಣಗೊಂಡಿದ್ದರಿಂದ ತುಂಬ ಪ್ರಯೋಜನವಾಗಲಿದೆ.
ಈ ಸಂದರ್ಭ ಕೆಪಿಸಿಸಿ ಸದಸ್ಯ ಎಂ ಎಸ್ ಮೊಹಮ್ಮದ್, ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಚೆಯರ್ ಮೆನ್ ನಾರಾಯಣ ಕಾಟುಕುಕ್ಕೆ, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ನ್ಯಾಯವಾದಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೇಪು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು, ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ರಾಮಕೃಷ್ಣ ವಿ.ಯು, ಉದ್ಯಮಿ ಗೋಪಾಲ ಪಾಟಾಲಿ, ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೈ ಕುಂಡಕೋಳಿ, ಎಂ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ಉಬೈದ್ ವಿಟ್ಲ ಬಝಾರ್, ವಿಟ್ಲ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಶರೀಫ್ ಮೂಸಾ, ಉದ್ಯಮಿ ಹಮೀದ್ ನಡ್ಕಾಸ್, ಅಡ್ಕಸ್ಥಳ ಮಸೀದಿ ಅಧ್ಯಕ್ಷ ಅಬ್ದುಲ್ಲ ಮಾದಮೂಲೆ, ಎಂಜಿನಿಯರ್ ರಫೀಕ್ ದಂಬೆ, ಎಂಜಿನಿಯರ್ ತಸ್ಲೀಮ್ ಪರ್ತಿಪ್ಪಾಡಿ, ಅಬೂಬಕ್ಕರ್ ಹಾಜಿ ಒಕ್ಕೆತ್ತೂರು ಆಗಮಿಸಿ ಶುಭ ಹಾರೈಸಿದರು.





