ಟರ್ಕಿ ಮತ್ತು ಸಿರಿಯಾದಲ್ಲಿ ಮತ್ತೆ ಭೂಕಂಪನ
ಇಸ್ತಾಂಬುಲ್: ಸೋಮವಾರ ಮತ್ತೆ ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4 ತೀವ್ರತೆ ದಾಖಲಾಗಿದೆ. ಇಸ್ರೇಲ್ ನಲ್ಲಿ ಕೂಡ ಭೂಕಂಪನದ ಅನುಭವವಾಗಿದೆ.
ಸೋಮವಾರದ ಭೂಕಂಪ, ಈ ಬಾರಿ 6.4 ರ ತೀವ್ರತೆಯೊಂದಿಗೆ, ದಕ್ಷಿಣ ಟರ್ಕಿಶ್ ನಗರದ ಅಂಟಾಕ್ಯಾ ಬಳಿ ಕೇಂದ್ರೀಕೃತವಾಗಿತ್ತು ಮತ್ತು ಸಿರಿಯಾ, ಈಜಿಪ್ಟ್ ಮತ್ತು ಲೆಬನಾನ್‌ನಲ್ಲಿ ಭಾಸವಾಯಿತು.
ಫೆಬ್ರವರಿ 6 ರಂದು ಟರ್ಕಿಯಲ್ಲಿ ಮೊದಲ ಬಾರಿಗೆ ಭೂಕಂಪನ ಸಂಭವಿಸಿತ್ತು. ಅಂದು ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.8ರಷ್ಟು ದಾಖಲಾಗಿತ್ತು. ಭೂಕಂಪನದಿಂದ 47,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.





