May 11, 2026

ನರೇಂದ್ರ ಮೋದಿ ಆನೆಯಿದ್ದ ಹಾಗೆ: ಕೆ.ಎಸ್.ಈಶ್ವರಪ್ಪ

0
image_editor_output_image1279393026-1676871332900.jpg

ರಾಯಚೂರು: ಚುನಾವಣೆ ಸಮಯದಲ್ಲಿ ಬಜೆಟ್ ಮಂಡನೆಯಾಗಿದೆ, ಕರ್ನಾಟಕದ ಬಜೆಟ್ ಮಂಡನೆಗೆ ಬಹಳ ಪಾವಿತ್ರತೆ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಕಂಡರೆ ಬಿಜೆಪಿ ನಾಯಕರಿಗೆ ಭಯ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ, ರಸ್ತೆಯಲ್ಲಿ ಕಾರು ಬಂದರೆ ನಾಯಿ ಬೊವ್ ಬೊವ್ ಅಂತ ಬೊಗಳುತ್ತೆ. ನಾನು ಸಿದ್ದರಾಮಯ್ಯ ಅವರನ್ನು ನಾಯಿ ಅಂತ ಕರೆತಿಲ್ಲ. ಭಯದ ವಿಚಾರಕ್ಕೆ ಉದಾಹರಣೆ ನೀಡಿದ್ದೇನೆ ಎಂದ ಅವರು ನರೇಂದ್ರ ಮೋದಿ ಆನೆಯಿದ್ದ ಹಾಗೆ, ಆನೆ ಹೋಗುವಾಗ ನಾಯಿಗಳು ಬೋಗಳುತ್ತವೆ. ಸಿದ್ದರಾಮಯ್ಯ ನಾಯಿ ಅಂತ ನಾನು ಹೇಳಲ್ಲ ಅಂತ ಕೀಳು ಮಟ್ಟಕ್ಕೆ ನಾನು ಹೋಗುವುದಿಲ್ಲ ಲೇವಡಿ ಮಾಡಿದರು.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಚೆಂಡು ಹೂ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಆಡಳಿತ ಪಕ್ಷದಲ್ಲಿದ್ದಾಗ ಐದು ವರ್ಷ ಆಡಳಿತ ಮಾಡಿ ಮತ್ತೆ ಚುನಾವಣೆಯಲ್ಲಿ ಸೋತಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದರೆ ಜನ ನಿಮ್ಮನ್ನು ತಿರಸ್ಕಾರ ಮಾಡುತ್ತಾ ಇರಲಿಲ್ಲ. ಚೆಂಡು ಹೂ ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಪಡೆದಿದೆ. ಮುಂಬರುವ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

Leave a Reply

Your email address will not be published. Required fields are marked *

error: Content is protected !!