March 26, 2026

ಉಳ್ಳಾಲ: ಕೆಎಸ್‌ಆರ್‌ಪಿ ಕಾನ್ ಸ್ಟೇಬಲ್ ಆತ್ಮಹತ್ಯೆ

0
image_editor_output_image381323571-1676870578657.jpg

ಉಳ್ಳಾಲ: ತಾಯಿಯನ್ನು ಕಳೆದುಕೊಂಡ ದುಃಖದಿಂದ ಹೊರಬರಲಾಗದೆ ಕೆಎಸ್‌ಆರ್‌ಪಿ ಕಾನ್ಸ್‌ಸ್ಟೆಬಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ ನಿವಾಸಿ ವಿಮಲನಾಥ ಜೈನರ್(28) ಆತ್ಮಹತ್ಯೆ ಮಾಡಿಕೊಂಡವರು.

ಅಸೈಗೋಳಿಯಲ್ಲಿರುವ ಕೆಎಸ್‌ರ್‌ಆ‌ಪಿಯ ಏಳನೇ ಬೆಟಾಲಿಯನ್ ನೂತನ ಬ್ಯಾಚ್‌ನ ಕಾನ್ಸ್‌ಸ್ಟೆಬಲ್‌ ಆಗಿದ್ದರು.

ಆರೋಗ್ಯ ಸಮಸ್ಯೆ ಹೊಂದಿದ್ದ ಅವರು ಅಸೈಗೋಳಿ ಸೈಟ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಅವರ ತಾಯಿ ನಾಲ್ಕು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು

ಆರೋಗ್ಯ ಸಮಸ್ಯೆಯೊಂದಿಗೆ ತಾಯಿಯನ್ನು ಕಳೆದುಕೊಂಡ ದುಃಖದಿಂದ ಹೊರಬರಲಾಗದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಭಾನುವಾರ ಸ್ನೇಹಿತನೊಂದಿಗೆ ಕರ್ತವ್ಯಕ್ಕೆ ತೆರಳಿದ್ದು

ಈ ಮಧ್ಯೆ ತಾನು ವಾಸವಿದ್ದ ಕೋಣಿಗೆ ಮರಳಿದ್ದರು. ತುಂಬಾ ಹೊತ್ತಾದರೂ ವಾಪಾಸ್ ಬಾರದ ಕಾರಣ ಸ್ನೇಹಿತ ಕೊಠಡಿಗೆ ಹೋಗಿ ನೋಡಿದಾಗ ವಿಮಲನಾಥ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!