May 11, 2026

ಚಿಕ್ಕಮಗಳೂರು: ಹಾಡಹಗಲೇ ಇಬ್ಬರು ಬೈಕ್ ಸವಾರರನ್ನು ಗುಂಡಿಕ್ಕಿ ಹತ್ಯೆ

0
images.jpeg

ಚಿಕ್ಕಮಗಳೂರು: ಗುಂಡಿನ ದಾಳಿಗೆ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ಚಿಕ್ಕಮಗಳುರು ಜಿಲ್ಲೆಯ ಬಾಳೆಹೊನ್ನೂರು ತಾಲೂಕಿನ ಚಂದ್ರುಳ್ಳಿಬಿದರೆ ಗ್ರಾಮದ ಬಳಿ ಉಜ್ಜಯಿನಿ ಗ್ರಾಮದ ರಮೇಶ್ ಎಂಬಾತ ಗುಂಡಿನ ದಾಳಿ ನಡೆಸಿದ ಆರೋಪಿ. ಗುಂಡಿನ ದಾಳಿಯಲ್ಲಿ ಮೃತಪಟ್ಟವರನ್ನು ಚಂದ್ರುಳ್ಳಿಬಿದರೆ ಗ್ರಾಮದ ಪ್ರಕಾಶ್ (28) ಮತ್ತು ಪ್ರವೀಣ್ (30) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!