May 11, 2026

ಕಡಬ: ಬೆಳ್ಳಂಬೆಳಿಗ್ಗೆ ಆನೆ ದಾಳಿ: 23 ವರ್ಷದ ಯುವತಿ ಸಹಿತ ಇಬ್ಬರು ಮೃತ್ಯು

0
IMG-20230220-WA0020

ಕಡಬ: ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿದ್ದು, ಯುವತಿ ಸಹಿತ ಇಬ್ಬರು ಮೃತಪಟ್ಟ ಘಟನೆ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ.

ರಮೇಶ್ ರೈ (50) ಮತ್ತು ರಂಜಿತಾ (23) ಮೃತರು.

ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ.

ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೂ ಆನೆ ದಾಳಿ ನಡೆಸಿದ್ದು, ಆನೆಯ ಅಟ್ಟಹಾಸಕ್ಕೆ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!