May 11, 2026

ಅಸಾದುದ್ದೀನ್ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

0
owaisi_delhi_residence_attacked_1676851857705_1676851870009_1676851870009.jpg

ನವ ದೆಹಲಿ: ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ, ಸಂಸದ ಅಸಾದುದ್ದೀನ್ ಓವೈಸಿ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ.

ಸಂಜೆ 5.30ರ ಸುಮಾರಿಗೆ ನವದೆಹಲಿಯ ಅಶೋಕ ರಸ್ತೆ ಪ್ರದೇಶದಲ್ಲಿರುವ ಒವೈಸಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. 2014ರ ನಂತರ ಇದು ನಾಲ್ಕನೇ ಘಟನೆಯಾಗಿದೆ ಎಂದು ಹೈದರಾಬಾದ್ ನ ಲೋಕಸಭಾ ಸದಸ್ಯ ಹೇಳಿದರು. ಜೈಪುರದಿಂದ ಹಿಂದಿರುಗಿದ ನಂತರ ತನ್ನ ಮನೆಗೆಲಸದವರು ದಾಳಿಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ಓವೈಸಿ ಹೇಳಿದರು. ಮಾಹಿತಿ ಪಡೆದ ನಂತರ, ಹೆಚ್ಚುವರಿ ಡಿಸಿಪಿ ನೇತೃತ್ವದಲ್ಲಿ ದೆಹಲಿ ಪೊಲೀಸರ ತಂಡವು ಅವರ ಮನೆಗೆ ತೆರಳಿ ಅಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಭಾನುವಾರ ರಾತ್ರಿ ರಾಜಧಾನಿಯಲ್ಲಿರುವ ಅವರ ಮನೆಯ ಕಿಟಕಿಗಳನ್ನು ಒಡೆದ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಎಐಎಂಐಎಂ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತ ತಮ್ಮ ದೆಹಲಿಯ ಮನೆಗೆ ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ.

ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳನ್ನು ಹಾನಿಗೊಳಿಸಿದೆ ಎಂದು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಓವೈಸಿ ಆರೋಪಿಸಿದ್ದಾರೆ.

ಇಂತಹ ದಾಳಿ ನಡೆದಿರುವುದು ಇದು ನಾಲ್ಕನೇ ಬಾರಿ, ನನ್ನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!